
ಸೇಡಂ, ನ,08 : ತಾಲ್ಲೂಕಿನ ತೊಟ್ನಳ್ಳಿ ಗ್ರಾಮದ ಶ್ರೀ ಮಹಾಂತೇಶ್ವರ ಹಿರೇಮಠ ಸಂಸ್ಥಾನ ಮಠದಲ್ಲಿ
ನವೆಂಬರ್ 9ರಂದು ಲಿಂಗೈಕ್ಯ ಆಯುರ್ವೇದ ಕೇಸರಿ ಶ್ರೀ ಗುರುಪಾದೇಶ್ವರ ಮಹಾಸ್ವಾಮೀಜಿಗಳ
23 ನೇ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿದೆ ಎಂದು ಕರದಾಳದ ವೇದಿಕತ್ವ ವೇದಮೂರ್ತಿ
ತೋಟಯ್ಯ ಶಾಸ್ತ್ರಿಗಳು ತಿಳಿಸಿದ್ದಾರೆ. ಮಠದ ಪರಿಸರದಲ್ಲಿ ಲಿಂಗೈಕ್ಯ ಶ್ರೀ ಗುರುಪಾದೇಶ್ವರ
ಮಹಾಸ್ವಾಮಿಜಿಗಳ 23ನೇ ಪುಣ್ಯಸ್ಮರಣೆ ನಿಮಿತ್ತ ಶ್ರೀ ಮಠದ ಪೀಠಾಧಿಪತಿಗಳಾದ ಷ. ಬ್ರ.ಡಾ.
ತ್ರಿಮೂರ್ತಿ ಶಿವಾಚಾರ್ಯರ ನೇತೃತ್ವದಲ್ಲಿ ನವೆಂಬರ್ 5 ರಿಂದ ನವೆಂಬರ್ 9 ವರೆಗೆ ಪ್ರತಿನಿತ್ಯ
ಸಂಜೆ 7.30 ರಿಂದ ಪ್ರವಚನ ನಂತರ ಧಾರ್ಮಿಕ ಕಾರ್ಯಕ್ರಮವನ್ನು ಜರುಗುತ್ತಿದ್ದು, ನ 9 ರಂದು
ಬೆಳಗ್ಗೆ 8 ಗಂಟೆಗೆ ಲಿಂಗೈಕ್ಯ ಶ್ರೀ ಗುರುಪಾದೇಶ್ವರ ಮಹಾಸ್ವಾಮಿಗಳ ಕರ್ತೃ ಗುದ್ದುಗೆಗೆ
ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪುಷ್ಪಾರ್ಚನೆ, ಬೆಳಿಗ್ಗೆ 9.30 ಮುತ್ತೈದೆಯರಿಗೆ ಉಡಿ
ತುಂಬುವ ಕಾರ್ಯಕ್ರಮ ನಂತರ ಧಾರ್ಮಿಕ ಸಭೆ ಪ್ರವಚನ ಮಂಗಳ ಕಾರ್ಯಕ್ರಮ ನಡೆಯಲಿದೆ
ಎಂದರು. ಸೇಡಂ ಶಿವಶಂಕರೇಶ್ವರ ಮಠದ ಷ.ಬ್ರ. ಶ್ರೀ ಶಿವಶಂಕರ ಶಿವಾಚಾರ್ಯ
ಮಹಾಸ್ವಾಮೀಜಿ ಅವರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ, ತೆಂಗಳಿ – ಮಂಗಲಗಿ ಮಠದ
ಶ್ರೀಗಳಾದ ಡಾ.ಶಾಂತಸೋಮನಾಥ ಶಿವಚಾರ್ಯರು ಸಾನಿಧ್ಯವನ್ನು ವಹಿಸಲಿದ್ದಾರೆ, ಸಿದ್ದಪ್ಪಯ್ಯ
ಮುತ್ಯಾ, ಕರದಾಳದ ವೈದಿಕತ್ವ ಶ್ರೀ ವೇದಮೂರ್ತಿ ತೋಟಯ್ಯ ಶಾಸ್ತ್ರಿಗಳು ಕಾರ್ಯಕ್ರಮದಲ್ಲಿ
ಭಾಗವಹಿಸಲಿದ್ದಾರೆ, ರಾತ್ರಿ 9:00ಗೆ ಸಂಗೀತ ಕಾರ್ಯಕ್ರಮ ಜರುಗುವುದು ಈ ಸಂಗೀತ
ಕಾರ್ಯಕ್ರಮದಲ್ಲಿ ಸಂಗಾವಿ, ಮೀನ ಹಾಬಾಳ, ಬೀರನಳ್ಳಿ, ಬಿಜ್ಜನಳ್ಳಿ, ಕುಕ್ಕುಂದಾ, ಮಂಗಲಗಿ,
ಕೊರವಿ, ಸೇಡಂ,ಮಳಖೇಡ, ತೆಂಗಳಿ ಹಾಗೂ ವಿವಿಧ ಗ್ರಾಮದ ಭಜನಾ ಮಂಡಳಿಗಳು, ಅಕ್ಕನ
ಬಳಗ ಭಜನಾ ಮಂಡಳಿಗಳು ಪಾಲ್ಗೊಳ್ಳಲಿದೆ ಎಂದರು.