ನಾಳೆ ತಿಂಥಣಿ ಮಠದಲ್ಲಿ ವಾರ್ಷಿಕ ಸಭೆ – ಶ್ರೀಸಿದ್ದರಾಮನಂದ ಸ್ವಾಮೀಜಿ

ದೇವದುರ್ಗ.ಡಿ.೦೪-೨೦೨೨ರ ಜನೆವರಿಯಲ್ಲಿ ನಡೆಯುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ಹಿನ್ನೆಲೆ ನ.೫ರಂದು ಬೆಳಗ್ಗೆ ೧೦ಕ್ಕೆ ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕವಿಭಾಗೀಯ ಪೀಠದಲ್ಲಿ ಭಕ್ತರು ಹಾಗೂ ಸಮುದಾಯ ಮುಖಂಡರ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀಸಿದ್ದರಾಮಾನಂದ ಸ್ವಾಮೀಜಿ ಹೇಳಿದರು.
ಶ್ರೀಮಠದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದರು. ಪ್ರತಿವರ್ಷ ಜನವರಿಯಲ್ಲಿ ನಡೆಯುವ ಹಾಲುಮತ ಸಂಸ್ಕೃತಿ ವೈಭವದ ಉತ್ಸವಕ್ಕೆ ಸಿದ್ದತೆ ಹಾಗೂ ಮೂರು ದಿನದ ಕಾರ್ಯಕ್ರಮಗಳ ತಯಾರಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಸಭೆಯಲ್ಲಿ ಕಲಬುರಗಿ ವಿಭಾಗೀಯ ಸಮುದಾಯದ ಮುಖಂಡರು ಹಾಗೂ ಭಕ್ತರು ಪಾಲ್ಗೊಂಡು ಸಲಹೆ, ಸೂಚನೆ ನೀಡಬಹುದು.
ಸಭೆಯಲ್ಲಿ ವಿವಿಧ ಜಿಲ್ಲೆಯ ಜನಪ್ರತಿನಿಧಿಗಳು, ಕನಕಗುರುಪೀಠದ ಸದಸ್ಯರು, ಕನಕ ನೌಕರರ ಸಂಘದ ಸದಸ್ಯರು, ನಿರ್ದೇಶಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.