
ತಾಳಿಕೋಟೆ:ಮಾ.4: ತಾಲೂಕಾ ವಿಶ್ವಕರ್ಮ ಸಮಾಜ ತಾಳಿಕೋಟೆ ಇವರ ನೇತೃತ್ವದಲ್ಲಿ ತಾಲೂಕಾ ವಿಶ್ವಕರ್ಮ ಸಮಾಜದ ಬೃಹತ್ ಸಮಾವೇಶವನ್ನು ಇದೇ ದಿ.5 ರವಿವಾರರಂದು ಬೆಳಿಗ್ಗೆ 10-30 ಗಂಟೆಗೆ ಪಟ್ಟಣದಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 8-30 ಗಂಟೆಗೆ ಶ್ರೀ ಅಂಬಾಭವಾನಿ ದೇವಸ್ಥಾನದಿಂದ ಶ್ರೀ ವಿಶ್ವಕರ್ಮರ ಮಹಾಮೂರ್ತಿ ಭವ್ಯ ಮೆರವಣಿಗೆಯು ಪ್ರಾರಂಭಗೊಂಡು ಶ್ರೀ ಸಂಗಮೇಶ್ವರ ಸಭಾಭವನಕ್ಕೆ ಮುಕ್ತಾಯಗೊಳ್ಳಲಿದೆ.
ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ನಡೆಯಲಿರುವ ಸಮಾವೇಶದ ದಿವ್ಯ ಸಾನಿದ್ಯವನ್ನು ನಾಲತವಾಡ, ಕೊಡೇಕಲ್ಲ, ತಾಳಿಕೋಟೆ ಬ್ರಹ್ಮಾಂಡಭೇರಿ ಮಠದ ಶ್ರೀ ಪಂಪಾಪತಿ ಮಹಾಸ್ವಾಮಿಗಳು, ಶ್ರೀ ಖಾಸ್ಗತೇಶ್ವರ ಮಠದ ಶ್ರೀ ಸಿದ್ದಲಿಂಗ ದೇವರು, ಶಹಾಪೂರ ಏಕದಂಡಿಮಠದ ಶ್ರೀ ಅಜೇಂದ್ರ ಮಹಾಸ್ವಾಮಿಗಳು, ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು, ಲೇಬಗೇರಿ ಶ್ರೀ ಮದಾನೆಗೊಂದಿ ಸಂಸ್ಥಾನ ಶ್ರೀಮಠದ ಶ್ರೀ ನಾಗಮೂರ್ತೇಂದ್ರ ಮಹಾಸ್ವಾಮಿಗಳು, ವಿಜಯಪೂರ ಮೂರುಝಾವಧೀಶ್ವರಮಠದ ಶ್ರೀ ಮಹೇಂದ್ರ ಮಹಾಸ್ವಾಮಿಗಳು, ಸಿಂಧಗಿ ಮೂರುಝಾವಧೀಶ್ವರಮಠದ ಶ್ರೀ ರಾಮಚಂದ್ರ ಮಹಾಸ್ವಾಮಿಗಳು, ಯಾದಗಿರಿ ಏಕದಂಡಿಮಠದ ಶ್ರೀ ಶ್ರೀನಿವಾಸ ಮಹಾಸ್ವಾಮಿಗಳು, ತಿಂಥಣಿ ಶ್ರೀ ಮೌನೇಶ್ವರ ಮಹಾಸ್ವಾಮಿಗಳು, ತಿಳಗೂಳ ಚಕ್ರ ಬಗಳಾಂಬಾ ಶಕ್ತಿಪೀಠದ ಶ್ರೀ ಮಹೇಶ್ವರಾನಂದತೀರ್ಥ ಮಹಾಸ್ವಾಮಿಗಳು, ಸಾಸನೂರ ಮಠದ ಶ್ರೀ ಮೂರುಝಾವಧೀಶ್ವರಮಠದ ಶ್ರೀಶೈಲ ಮಹಾಸ್ವಾಮಿಗಳು, ತಾಳಿಕೋಟೆ ಕಾಳಿಕಾದೇವಸ್ಥಾನದ ಶ್ರೀ ವಿಶ್ವನಾಥ ಆಚಾರ್ಯ, ವಹಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬಾರಾಜು ನಿಗಮದ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ವಹಿಸುವರು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಹಾಗೂ ಅಖೀಲ ಕರ್ನಾಟಕ ವಿಶ್ವಕರ್ಮ ಮಹಾ ಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ಅವರು ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ(ಸಾಸನೂರ), ಮಾಜಿ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ), ಶಿವಪುತ್ರಪ್ಪ ದೇಸಾಯಿ, ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿಠ್ಠಲಸಿಂಗ್ ಹಜೇರಿ, ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ), ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ದೇವರ ಹಿಪ್ಪರಗಿ ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ(ಕು.ಸಾಲವಾಡಗಿ), ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ, ಕಾಂಗ್ರೇಸ್ ಧುರಿಣ ಆನಂದಗೌಡ ದೊಡಮನಿ, ನೇತ್ರತಜ್ಞ ಕಾಂಗ್ರೇಸ್ ಧುರಿಣ ಡಾ.ಪ್ರಭುಗೌಡ ಲಿಂಗದಳ್ಳಿ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಎಸ್.ಎಸ್.ವಿಧ್ಯಾಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ, ಪುರಸಭಾ ಅಧ್ಯಕ್ಷ ಸಂಗಮೇಶ ಇಂಗಳಗಿ, ಉಪಾಧ್ಯಕ್ಷ ಮುಸ್ತಫಾ ಚೌದ್ರಿ, ಕೆಪಿಸಿಸಿ ಮಾಜಿ ಸದಸ್ಯ ಸುರೇಶಬಾಬುಗೌಡ ಬಿರಾದಾರ(ಫೀರಾಪೂರ), ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ), ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ಶ್ರೀನಿವಾಸ ಮಳವಳ್ಳಿ, ಪ್ರಧಾನ ಕಾರ್ಯದರ್ಶಿ ಲೋಹಿತ ಕಲ್ಲೂರ, ಪ್ರಮೋದ ಬಡಿಗೇರ, ಮಾನಪ್ಪ ಪತ್ತಾರ, ಪ್ರದೀಪ ಗಿರಗಾಂವಕರ, ಶಶಿಧರ ಪತ್ತಾರ(ಬಾವೂರ), ಮಲ್ಲಣ್ಣ ತಾರನಾಳ, ವಿಶ್ವಕರ್ಮ ಸಮಾಜದ ತಾಲೂಕಾ ಅಧ್ಯಕ್ಷ ಪ್ರಭಾಕರ ಬಡಿಗೇರ(ಕೊಡಗಾನೂರ), ಯುವ ಘಟಕದ ಅಧ್ಯಕ್ಷ ಭೀಮಾಶಂಕರ ಪತ್ತಾರ(ಹಂಚಲಿ), ಆರ್.ಆರ್.ಬಡಿಗೇರ, ಶ್ರೀಮತಿ ಜಗದೇವಿ ಸರಾಫ, ಶ್ರೀಮತಿ ಸಹನಾ ಬಡಿಗೇರ, ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ, ವಿರುಪಾಕ್ಷಿ ಪತ್ತಾರ, ಲಕ್ಷ್ಮಣ ಗಲಗಲಿ, ಆಗಮಿಸುವರು.
ವಿಶೇಷ ಉಪನ್ಯಾಸಕರಾಗಿ ದಿ.ಶಿಪ್ಪಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಭಾರತ ಸರ್ಕಾರದ ನಿರ್ದೇಶಕರಾದ ಶ್ರೀಕಾಂತ ಪತ್ತಾರ ಅವರು ಆಗಮಿಸುವರೆಂದು ಪ್ರಕಟನೆ ತಿಳಿಸಿದೆ.