ನಾಳೆ ತಡಕಲ್ ಶಾಲೆ ಗ್ರಾಮಸ್ಥರಿಂದ ಬಂದ್

ಬಿಇಓ ವೆಂಕಟೇಶ್ ವರ್ತನೆ ಖಂಡನೆ – ಜ್ಯೋತಿರ್ಲಿಂಗನಗೌಡ
ಮಾನ್ವಿ.ನ.22- ತಾಲೂಕಿನ ತಡಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸದಾಶಿವಪ್ಪನವರನ್ನು ಕಾನೂನು ಬಾಹಿರವಾಗಿ ಶಾಲೆ ಎಸ್‌ಡಿಎಮ್‌ಸಿ ಸಮಿತಿ ಗಮನಕ್ಕೆ ತರದೆ ಬಿಇಓ ವೆಂಕಟೇಶ ಗುಡ್ಯಾಳ ಅವರು ಡೆಪ್ಯುಟೇಶನ್ ಮಾಡಿರುವ ಕ್ರಮ ಖಂಡಿಸಿ, ಗ್ರಾಮಸ್ಥರು ನ.23 ರಂದು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಸ್‌ಡಿಎಮ್‌ಸಿ ಅಧ್ಯಕ್ಷ ಜ್ಯೋತಿರ್ಲಿಂಗನಗೌಡ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ. 19ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಡಕಲ್ ಶಾಲೆ ಮುಖ್ಯ ಶಿಕ್ಷಕ ಸದಾಶಿವಪ್ಪನವರು ರಜೆಯಲ್ಲಿರುವ ವೇಳೆ ಏಕಾಏಕಿಯಾಗಿ ಶಾಲೆಗೆ ಬಂದು ಒತ್ತಾಯಪೂರ್ವಕವಾಗಿ ಮುಖ್ಯ ಶಿಕ್ಷಕನನ್ನು ಬಿಡುಗಡೆ ಮಾಡುವ ಮೂಲಕ ಬಿಇಓ ವೆಂಕಟೇಶ ಗುಡ್ಯಾಳ ಅವರು ಎಸ್.ಡಿ.ಎಮ್.ಸಿ ಸಮಿತಿ ಗಮನಕ್ಕೆ ತರದೆ ಏಕಪಕ್ಷೀಯವಾಗಿ ಕ್ರಮಕೈಗೊಂಡಿದ್ದಾರೆ.
ಸ್ವತಃ ಪಾಲಕರೇ ವಾಲ್ಮೀಕಿ ಜಯಂತಿಯಂದು ಗ್ರಾಮದ ಶಾಲೆಗೆ ಮಕ್ಕಳನ್ನು ಕಳುಹಿಸಿರುತ್ತಾರೆ. ಈ ಬಗ್ಗೆ ಬಿ.ಇಓ ಅವರು ತಪ್ಪಾಗಿ ಭಾವಿಸಿ ಮುಖ್ಯ ಶಿಕ್ಷಕನ ವಿರುದ್ಧ ದೂರು ಬಂದಿದೆ ಎಂದು ಕ್ರಮಕೈಗೊಂಡಿರುವ ಘಟನೆ ಸರಿಯಲ್ಲ ಗಮನಕ್ಕೆ ದೂರು ಬಂದ ಕೂಡಲೇ ಅಧಿಕಾರಿಗಳು ಶಾಲೆ ಸುಧಾರಣ ಸಮಿತಿ ಸದಸ್ಯರ ನಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಶಾಲೆ ಶಿಕ್ಷಕರ ಮೇಲೆ ಈ ರೀತಿಯ ಕ್ರಮ ಜರುಗಿರುವ ಘಟನೆಯಿಂದಾಗಿ ಇನ್ನೂಳಿದ ಶಿಕ್ಷಕರು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ತಡಕಲ್ ಗ್ರಾಮದಲ್ಲಿ ಹೈಸ್ಕೂಲ್ ಆರಂಭವಾಗಿದ್ದು ಈಗಲೂ ಶಿಕ್ಷಕರ ಕೊರತೆ ಇದೆ. ಈ ಬಗ್ಗೆ ಬಿ.ಇಓ ಅಧಿಕಾರಿಗಳು ಗಮನ ನೀಡುತ್ತಿಲ್ಲ. ಆದರೆ ಪ್ರಸ್ತುತ ಇರುವ ಶಿಕ್ಷಕರ ಜೊತೆ ಶಾಲೆಯನ್ನು ನಡೆಸಿಕೊಂಡು ಹೋಗಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶಾಲೆ ಮುಖ್ಯ ಶಿಕ್ಷಕನನ್ನು ಏಕಾಏಕಿಯಾಗಿ ಬೇರೆ ಶಾಲೆಗೆ ಡೆಪ್ಯುಟೇಶನ್ ಹಾಕಿರುವುದು ಶಾಲೆಯ ಅಭಿವೃದ್ಧಿ ಮತ್ತು ಕಲಿಕೆಗೆ ತೊಂದರೆಯಾಗುತ್ತಿದೆ, ಕೂಡಲೇ ರಾಯಚೂರು ಡಿಡಿಪಿಐ ಅವರು ಮತ್ತು ಬಿಇಓ ಅವರು ಶಾಲೆಗೆ 14 ಜನ ಶಿಕ್ಷಕರನ್ನು ಖಾಯಂ ನೇಮಕ ಮಾಡಬೇಕು. ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಬೇರೆ ಯಾವುದೇ ಒತ್ತಡಕ್ಕೆ ಮಣಿದು ಶಿಕ್ಷಕರ ಮೇಲೆ ಕಾನೂನು ಬಾಹಿರವಾಗಿ ಕ್ರಮ ಜರುಗಿಸಿರುವುದು ಸರಿಯಲ್ಲ ಎಂದು ಶಾಲೆ ಸುಧಾರಣ ಸಮಿತಿ ಸದಸ್ಯರು ಬಿ.ಇಓ ಅವರ ವರ್ತನೆಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಲಕ್ಷ್ಮೀಪತಿಗೌಡ, ಮಲ್ಲಯ್ಯ ಕುರುಬರ,ಯಂಕಪ್ಪ ಯಾದವ್,ಯಂಕನಗೌಡ,ನಿಂಗಪ್ಪ ಕುರುಬರ,ವೀರೇಶ್ ಮಡಿವಾಳ, ಸುಗುಾರೇಶ್ ಬಡಿಗೇರ್, ದುರುಗಪ್ಪ, ಮಲ್ಲು ನಾಯಕ್ ಉಪಸ್ಥಿತರಿದ್ದರು