ನಾಳೆ ಡಾ.ಅಂಬೇಡ್ಕರ ಜಯಂತೋತ್ಸವ

ಚಿಂಚೋಳಿ,ಜೂ.4- ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಚಿಂಚೋಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಾಳೆ ದಿನಾಂಕ 05-06-2023. ರಂದು ಆಯೋಜಿಸಲಾಗಿದೆ.
ತಾಲೂಕಿನ ಎಲ್ಲಾ ಸಮಾಜದ ಮುಖಂಡರು. ಈ ಜಯಂತಿ ಉತ್ಸವಕ್ಕೆ ಆಗಮಿಸಿ ಯಶಸ್ವಿ ಗೊಳಿಸುವಂತೆ ಡಾ, ಬಿ ಆರ್ ಅಂಬೇಡ್ಕರ್ ಅವರ 132 ನೇ ಜಯಂತಿ ಸಮಿತಿಯ ಅಧ್ಯಕ್ಷರಾದ ಗೋಪಾಲ ರಾಂಪುರ ತಿಳಿಸಿದ್ದಾರೆ.
ಈ ಜಯಂತಿ ಉತ್ಸವದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗನಾದ ರಾಜರತ್ನ ಅಂಬೇಡ್ಕರ್ ಅವರು ಆಗಮಿಸುತ್ತಿದ್ದು ಎಲ್ಲಾ ನನ್ನ ಕುಲಬಾಂಧವರು ಹೆಚ್ಚಿನ ಪ್ರಮಾಣದಲ್ಲಿ ಬಂದು ಜಯಂತಿಯನ್ನು ಯಶಸ್ವಿಗೊಳಿಸಬೇಕು ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಮಾವಳಿ ಶಂಕರ್ ಅವರು ಕೂಡ ಆಗಮಿಸುತ್ತಿದ್ದಾರೆ ಮತ್ತು ನೂತನ ಸಚಿವರಾಗಿ ಆಯ್ಕೆಯಾದ ಪ್ರಿಯಾಂಕ ಖರ್ಗೆಜಿ ಅವರು ಕೂಡ ಹಾಗೂ ನೂತನ ಸಚಿವರಾದ ಶಂಪ್ರಕಾಶ್ ಪಾಟೀಲ್ ಅವರು ಕೂಡ ಈ ಜಯಂತೋತ್ಸವಕ್ಕೆ ಆಗಮಿಸುತ್ತಿದ್ದಾರೆ ಹಾಗೂ ಚಿಂಚೋಳಿ ಶಾಸಕರಾದ ಅವಿನಾಶ್ ಜಾಧವ್ ಕೂಡ ಆಗಮಿಸುತ್ತಿದ್ದಾರೆ ಅದರ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೇಕೆಂದು ಜಯಂತಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಯ ಅಧ್ಯಕ್ಷರು ವಿವಿಧ ಸಮಾಜದ ಅಧ್ಯಕ್ಷರು ಈ ಜಯಂತಿ ಭಾಗವಹಿಸಿ ಬೇಕೆಂದು ಜಯಂತಿ ಸಮಿತಿ ಅಧ್ಯಕ್ಷರಾದ ಗೋಪಾಲ ರಾಂಪುರ, ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ