ನಾಳೆ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್

ದಾವಣಗೆರೆ. ಮಾ.೧೮; ಜಿಲ್ಲಾ ಬಿತ್ತನೆ ಬೀಜ ಕ್ರಿಮಿನಾಶಕ ಮತ್ತು ರಸಗೊಬ್ಬರ ಮಾರಾಟಗಾರರ ಸಂಘದ ವತಿಯಿಂದ ಮಾ.೧೯ ರಂದು ಬೆಳಗ್ಗೆ ೯ ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಥಮಬಾರಿಗೆ ಟೆನ್ನಿಸ್ ಬಾಲ್ ಕ್ರಿಕೆಟ್‌ ಟೂರ್ನಮೆಂಟ್ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಲೋಕಿಕೆರೆ ನಾಗರಾಜ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಂದ್ಯಾವಳಿಗೆ ಅಧ್ಯಕ್ಷರಾದ ಹೆಚ್.ಲೋಕಿಕೆರೆ ನಾಗರಾಜ್ ಚಾಲನೆ ನೀಡಲಿದ್ದಾರೆ.ಸಂಘದ ಗೌರವಾಧ್ಯಕ್ಷ ಶಿವಮೂರ್ತಪ್ಪ ಅಗಸನಕಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ.ಜಂಟಿ‌ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಉಪಸ್ಥಿತರಿರುವರು.ಮುಖ್ಯ ಅತಿಥಿಗಳಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಂ ಉಮಾಪತಯ್ಯ,ಖಜಾಂಚಿ ಆರ್.ಜಿ ಶ್ರೀನಿವಾಸಮೂರ್ತಿ, ಕೃಷಿ ಇಲಾಖೆ ಎಡಿಎ ಶ್ರೀಧರಮೂರ್ತಿ,ತಿಪ್ಪೇಸ್ವಾಮಿ ಆಗಮಿಸಲಿದ್ದಾರೆ. ಪಂದ್ಯಾವಳಿಯಲ್ಲಿ ೧೨ ತಂಡಗಳು ಭಾಗವಹಿಸಲಿವೆ.ಪ್ರಥಮ ಬಹುಮಾನ ೧೨ ಸಾವಿರ,ದ್ವಿತೀಯ ೧೦ ಸಾವಿರ ಹಾಗೂ ತೃತೀಯ ಬಹುಮಾನವಾಗಿ ೫ ಸಾವಿರ ನಗದು ನೀಡಲಾಗುವುದು ಎಂದರು.ಮಾ‌.೨೯ ರ ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸಮೂರ್ತಿ,ಪ್ರಮೋದ್,ಪ್ರತೀಕ್,ಶಿವಣ್ಣ,ಕೃಷ್ಣಮೂರ್ತಿ,ಕಿರಣ್ ಬಾಳೆಹೋಲ ಉಪಸ್ಥಿತರಿದ್ದರು.