ನಾಳೆ ಜ್ಞಾನ ಶಿವಯೋಗಾಶ್ರಮದಲ್ಲಿ ಕಾರ್ತಿಕ ದೀಪೋತ್ಸವ

ಬೀದರ: ಡಿ.1:ವಿಶ್ವ ಶಾಂತಿ ಮತ್ತು ಲೋಕ ಕಲ್ಯಾಣಾರ್ಥ ನಗರದ ನೌಬಾದ ಹತ್ತಿರದ ಜ್ಞಾನ ಶಿವಯೋಗಾಶ್ರಾಮದಲ್ಲಿ ವಿಶ್ವ ಕಲ್ಯಾಣ ಪೌಂಡೇಶನ ಮತ್ತು ಶ್ರೀ ಮಾತೇಶ್ವರಿ ಗೋಶಾಲಾ ಸಹಯೋಗದಲ್ಲಿ ಪೂಜ್ಯ ಡಾ|| ರಾಜಶೇಖರ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಾಳೆ ಸಾಯಂಕಾಲ 4.00 ಗಂಟೆಗೆ ಸಾಮೂಹಿಕ ಕಾರ್ತೀಕ ದೀಪೋತ್ಸವ ಧರ್ಮ ಸಮಾರಂಭ ಏರ್ಪಡಿಸಲಾಗಿದೆ.

ಆ ಮುಂಚೆ ಗೋಪೂಜೆ, ಮೃಣ್ಮಯ ಶಿವಲಿಂಗದ ಪೂಜೆಯು ನಡೆಯಲಿದೆ.

ಮಾಜಿ ಸಚಿವರು ಹಾಲಿ ಶಾಸಕ ಬಂಡೆಪ್ಪ ಖಾಶೆಂಪೂರ ಸಮಾರಂಭ ಉದ್ಘಾಟಿಸುವರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಬೀದರ ಸ್ಥಳಿಯ ಶಾಸಕ ರಹೀಂ ಖಾನ್ ಸೇರಿದಂತೆ ಸಮಾಜದ ಗಣ್ಯರು ಪಾಲ್ಗೊಳ್ಳುವ ಈ

ಸಮಾರಂಭಕ್ಕೆ ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿಬೇಕೆಂದು ಆಶ್ರಾಮದ ಸದ್ಭಕ್ತರು ಹಾಗೂ ಶ್ರೀ ವೈಷ್ಣೋದೇವಿ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ ಪ್ರಕಟಣೆಲ್ಲಿ ತಿಳಿಸಿದ್ದಾರೆ.