ನಾಳೆ ಜೆ.ಹೆಚ್ ಪಟೇಲ್ ಕಾಲೇಜಿನ ಘಟಿಕೋತ್ಸವ


ದಾವಣಗೆರೆ. ನ.೨೯;  ನಗರದ ಜೆ . ಹೆಚ್ . ಪಟೇಲ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಅಂಡ್ ಟೆಕ್ನಾಲಜಿ  ಕಾಲೇಜಿನಲ್ಲಿ  ನಾಳೆ ಬೆಳಗ್ಗೆ ೧೦ ಕ್ಕೆ ಕುವೆಂಪು ಕನ್ನಡಭವನದಲ್ಲಿ ಕಾಲೇಜು ಘಟಿಕೋತ್ಸವ, ಕನ್ನಡ ರಾಜ್ಯೋತ್ಸವ , ಪದವಿ ಪ್ರಧಾನ ಕಾರ್ಯಕ್ರಮ ಹಾಗೂ ಚಿಗುರು -2021 ನಡೆಯಲಿದೆ ಎಂದು ಪ್ರಾಂಶುಪಾಲರಾದ ಅಶ್ವಿನಿ ಜಿ.ಟಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು
ಪದವಿ ಪ್ರದಾನ ಕಾರ್ಯಕ್ರಮವನ್ನು ದಾವಣಗೆರೆ ವಿವಿಯ ಕುಲಪತಿ ಪ್ರೊ.ಶರಣಪ್ಪ ವಿ ಹಲಸೆ ಚಾಲನೆ ನೀಡಲಿದ್ದಾರೆ.ಅಧ್ಯಕ್ಷತೆಯನ್ನು ಮಂಗಳ ಜ್ಯೋತಿ ವಿದ್ಯಾಸಂಸ್ಥೆ ಅಧ್ಯಕ್ಷೆ ಶ್ರೀಮತಿ ಷಹನಾಜ್ ಬಿ  ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಡಾ . ಹೆಚ್ . ಎಸ್ . ಮಂಜುನಾಥ್ ಕುರ್ಕಿ, ದಿನೇಶ್ ಕೆ . ಶೆಟ್ಟಿ  ಆಗಮಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ತಿಕ್, ತಿಪ್ಪೇಸ್ವಾಮಿ, ಅಕ್ಷತಾ ಇದ್ದರು.