ನಾಳೆ ಜಿಲ್ಲಾಮಟ್ಟದ ವಿದ್ಯಾರ್ಥಿಗಳ ಸಂಕಲ್ಪ ಸಮಾವೇಶ : ಸುರೇಶ ಲೇಂಗಟಿ

ಕಲಬುರ್ಗಿ, ನ,14: ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳ ಆತ್ಮವಿಶ್ವಾಸ ವೃದ್ಧಿ ಮತ್ತು ವಿದ್ಯಾರ್ಥಿ ಸಮುದಾಯದಲ್ಲಿ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿಯ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳ ದಿನಾಚರಣೆ ಪ್ರಯುಕ್ತ ಒಂದು ದಿನದ ಜಿಲ್ಲಾ ಮಟ್ಟದ ವಿದ್ಯಾರ್ಥಿಗಳ ಸಂಕಲ್ಪ ಸಮಾವೇಶವನ್ನು ತಾಲೂಕಿನ ನಾವದಗಿ (ಬಿ) ಗ್ರಾಮದ ಸಾಂಸ್ಕೃತಿಕ ಲೋಕ ದೇಶೀ ಕೇಂದ್ರ ವಸತಿ ಶಾಲಾ ಪ್ರಾಂಗಣದಲ್ಲಿ ನ.15 ರ ಬೆಳಗ್ಗೆ 10.30 ಕ್ಕೆ ಆಯೋಜಿಸಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಸುರೇಶ ಲೇಂಗಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿ ಜನಾಂಗದಲ್ಲಿ ಉತ್ಸಾಹ ಮತ್ತು ಪೆÇ್ರೀತ್ಸಾಹ ನೀಡುವ ಕಾರ್ಯ ತಾಲೂಕಾ ಕಸಾಪ ಮಡುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ಮಕ್ಕಳ ಸಾಹಿತಿ ಎ ಕೆ ರಾಮೇಶ್ವರ ಸಮಾವೇಶ ಉದ್ಘಾಟಿಸಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಸಂಸ್ಥೆಯ ಮುಖ್ಯಸ್ಥ ಡಾ.ರಾಜೇಂದ್ರ ಯರನಾಳೆ ಅಧ್ಯಕ್ಶತೆ ವಹಿಸಲಿದ್ದು, ಮಾಜಿ ಎಂಎಲ್ಸಿ ಅಮರನಾಥ ಪಾಟೀಲ, ಕಮಲಾಪುರ ತಹಾಸೀಲ್ದಾರ್ ಸುರೇಶ ವರ್ಮಾ, ಎಪಿಎಂಸಿ ಉಪಾಧ್ಯಕ್ಷ ರಾಜಕುಮಾರ ಕೋಟೆ, ಸಹಕಾರಿ ಧುರೀಣ ವೈಜನಾಥ ತಡಕಲ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಿಟ್ಟೇಸಾಬ್ ಮುಲ್ಲಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
11.30 ಜರುಗಲಿರುವ ಮೊದಲ ಗೋಷ್ಠಿಯಲ್ಲಿ ಬಿಇಓ ವೀರಣ್ಣಾ ಬೊಮ್ಮನಳ್ಳಿ ಅಧ್ಯಕ್ಷತೆಯಲ್ಲಿ ಕಥೆ-ನೈತಿಕಥೆ ಕುರಿತು ಹಿರಿಯ ಸಾಹಿತಿ ಡಾ.ಶರಣಪ್ಪ ಮಾಳಗಿ, ಆರೋಗ್ಯಕ್ಕೆ ಆಪ್ತ ಸಲಹೆ ಕುರಿತು ಡಾ. ಅಂಬಾರಾಯ ಕಂಟಿಕರ್ ಉಪನ್ಯಾಸ ನೀಡಲಿದ್ದಾರೆ. ಸಹಕಾರಿ ಧುರೀಣ ಸುಭಾಷ ಬಿರಾದಾರ, ಶಿವಕುಮಾರ ಪಸಾರ, ಅನೀಲಕುಮಾರ ಕೋರೆ,ಕಮಲಾಪುರ ಕಸಾಪ ಗೌರವ ಕಾರ್ಯದರ್ಶಿ ರವೀಂದ್ರ ಬಿಕೆ, ಕೋಶಾಧ್ಯಕ್ಷ ನಾಗಣ್ಣ ವಿಶ್ವಕರ್ಮ, ಮಹಿಳಾ ಪ್ರತಿನಿಧಿ ಕಸ್ತೂರಿಬಾಯಿ ರಾಜೇಶ್ವರ, ಸಂಘಟನಾ ಕಾರ್ಯದರ್ಶಿ ಆನಂದ ವಾರಿಕ್,ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ.