ನಾಳೆ ಜಿಲ್ಲಾಮಟ್ಟದ ದೇಹದಾಢ್ರ್ಯ ಸ್ಪರ್ಧೆ


ಹುಬ್ಬಳ್ಳಿ,ಮಾ.18: ಧಾರವಾಡ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಶಿಯೇಶನ್ ವತಿಯಿಂದ ಮಾರ್ಚ್ 19 ರಂದು ಸಂಜೆ 5ಕ್ಕೆ ಸುಭಾಷನಗರದ ಎಚ್.ಕೆ.ಜಿಎನ್. ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ದೇಹ ದಾರ್ಢ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಅಸೋಶಿಯೇಶನ್ ಕಾರ್ಯದರ್ಶಿ ಶಂಕರ ಪಿಳೈ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 55 ಕೆ.ಜಿ., 60 ಕೆ.ಜಿ., 65 ಕೆ.ಜಿ., 70 ಕೆ.ಜಿ., 75 ಕೆ.ಜಿ. ಹಾಗೂ 75 ಕೆ.ಜಿ. ಮೇಲ್ಪಟ್ಟ ಆರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದರು.
ಪ್ರತಿಯೊಂದು ಗುಂಪಿನಿಂದ ಮೊದಲ ಸ್ಥಾನ ಪಡೆದ ಐವರಿಗೆ ಮೂರು ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ನೀಡಲಾಗುವುದು. ಟೈಟಲ್ ವಿಜೇತರಿಗೆ ಹತ್ತು ಸಾವಿರ, ರನ್ನರ್ ಅಪ್ ಗೆ ಐದು ಸಾವಿರ ನಗದು, ಬೆಸ್ಟ್ ಪೆÇೀಸರ್ ಗೆ 2500 ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಸಲೀಂ ಗೌರ್, ಅನೀಸ್ ದಲಾಲ್, ಮೋಹನ ಹೆಬ್ಬಳ್ಳಿ, ಯೂನೂಸ್ ಕೊಪ್ಪಳ, ಕೃಷ್ಣ ಚಿಕ್ಕತುಂ