ನಾಳೆ ಜಗದ್ಗುರು ರೇಣುಕಾಚಾರ್ಯರ 46ನೇ ಜಯಂತ್ಯೋತ್ಸವ ಆಚರಣೆ: ವೀರೇಂದ್ರ ರುದ್ನೂರ್

ಸೇಡಂ, ಮಾ,21 : ಪಟ್ಟಣದಲ್ಲಿರುವ ಆರಾಧ್ಯ ದೈವ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿ ನಾಳೆ (ಮಾರ್ಚ್ 22 ರಂದು) 1008 ಶ್ರೀಮದ್ ಜಗದ್ಗುರು ರೇಣುಕಾಚಾರ್ಯರ 46ನೇ ಜಯಂತೋತ್ಸವ ಹಾಗೂ
ಧಾರ್ಮಿಕ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಗದ್ಗುರು ರೇಣುಕಾಚಾರ್ಯರ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ವೀರೇಂದ್ರ ರುದ್ನೂರ್ ಹೇಳಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿದ್ದೇಶ್ವರ ದೇವಾಲಯ ಚಾರಿಟೇಬಲ ಮತ್ತು ವೆಲ್ವೇರ್ ಟ್ರಸ್ಟ್, ರೇಣುಕಾ ಜಯಂತಿ ಉತ್ಸವ ಸಮಿತಿ, ಅಖಿಲ ಭಾರತ ವೀರಶೈವ ಮಹಾಸಭಾ,ಯುವ ಘಟಕ,ಮಹಿಳಾ ಘಟಕ ಹಾಗೂ ವೀರಶೈವ ಶೈಕ್ಷಣಿಕ ಹಾಗೂ ಕಲ್ಯಾಣ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಈ ಜಯಂತೋತ್ಸವ ಉತ್ಸವದಂದು ಇಲ್ಲಿನ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 7 ಗಂಟೆ 15. ನಿಮಿಷಕ್ಕೆ ಮೂಲ ಕರ್ತೃ ಶ್ರೀ ಜಗದ್ಗುರು ರೇಣುಕಾಚಾರ್ಯರ ಗದ್ದಿಗೆ ಮಹಾರುದ್ರಭಿಷೇಕವನ್ನು ಉಮೇಶ ಪಾಟೀಲ ಯಾಕಾಪುರ ಅವರಿಂದ ಜರುಗುವುದು, ಬೆಳಗ್ಗೆ 10.30ಕ್ಕೆ ಜಂಗಮರಿಗೆ ಪ್ರಸಾದ ಶೆಟ್ಟಿ ಗೌಡ ಪರಿವಾರದವರಿಂದ ಜರುಗಲಿದೆ. ಸಂಜೆ 4 ಕ್ಕೆ ಶ್ರೀಮದ್ ಜಗದ್ಗುರು ರೇಣುಕಾಚಾರ್ಯರ ತೊಟ್ಟಿಲು ಕಾರ್ಯಕ್ರಮವನ್ನು ಅಕ್ಕನ ಬಳಗದ ಮಾತೆಯರಿಂದ ನಡೆಯಲಿದೆ.ನಂತರ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ,ಸಂಜೆ 6.30.ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು
ಶಿವಶಂಕರೇಶ್ವರ ಮಠದ ಷ. ಬ್ರ.ಶ್ರೀ ಶಿವಶಂಕರ ಶಿವಾಚಾರ್ಯರ ಮಹಾಸ್ವಾಮೀಜಿ ಅವರು
ವಹಿಸಲಿದ್ದಾರೆ.ಸಾನಿಧ್ಯವನ್ನು ತೋಟ್ನಳ್ಳಿಯ ಶ್ರೀಮಹಾಂತೇಶ್ವರ ಮಠದ ಶ್ರೀಗಳಾದ ಷ.ಬ್ರಡಾ ತ್ರಿಮೂರ್ತಿ ಶಿವಾಚಾರ್ಯರು, ನಿಡಗುಂದಾ ಪಂಚನಂದಿ ಮಠದ ಶ್ರೀಗಳಾದ ಕರುಣೇಶ್ವರ ಸ್ವಾಮೀಜಿ, ಹಾಲಪ್ಪಯ್ಯ ವಿರಕ್ತ ಮಠದ ಶ್ರೀಗಳಾದ ಪಂಚಾಕ್ಷರ ಮಹಾಸ್ವಾಮೀಜಿ ಅವರು ವಹಿಸಲಿದ್ದಾರೆ.ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ.ವೈದ್ಯಕೀಯ ಮತ್ತು ಕೌಶಲ್ಯಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಊಡಗಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಅತಿಥಿಗಳಾಗಿ ಆಗಮಿಸಲಿದ್ದಾರೆ,ರೇಣುಕಾ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ವೀರೇಂದ್ರ ರೂನ್ನೂರ, ಜಯಂತೋತ್ಸವ ಕಾರ್ಯದರ್ಶಿ ಮಹೇಶ ಎಳಮನಿ,ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕ ಅಧ್ಯಕ್ಷ ಚಂದ್ರಶೆಟ್ಟಿ ಬಂಗಾರ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಅವರು ತಿಳಿಸಿದರು, ಶಂಕ್ರಪ್ಪ ಕೂಸಗಿ,ಮಹೇಶ ಎಳಮನಿ, ಚಂದ್ರಶೆಟ್ಟಿ ಬಂಗಾರ,ಬಸವರಾಜ ರಾಯಕೋಡ,ಜಗದೇವಪ್ಪ ಜಪಾಟಿ ಇದ್ದರು.