ನಾಳೆ ಚೌಡೇಶ್ವರಿದೇವಿ ವಾರ್ಷಿಕೋತ್ಸವ

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 48;

ದೇವನಹಳ್ಳಿ, ಮೇ೮; ಸರ್ವಶಕ್ತ್ಯಾತ್ಮಕ ಶ್ರೀ ಚೌಡೇಶ್ವರಿ ಅಮ್ಮನವರ ೧೧ನೇಯ ವಾರ್ಷಿಕೋತ್ಸವವನ್ನು ಇದೇ ತಿಂಗಳ ದಿನಾಂಕ ನಾಳೆ ಮತ್ತು ಶುಕ್ರವಾರ ಏರ್ಪಪಡಿಸಲಾಗಿದೆ ಎಂದು ಎಸ್ ಎಲ್ ಎನ್ ಅಶ್ವಥ್ ನಾರಾಯಣ್ ತಿಳಿಸಿದರು.
ದೇವನಹಳ್ಳಿ ಟೌನಿನ ಪಾರ್ಕ್ ರಸ್ತೆಯಲ್ಲಿರುವ ಪ್ರಸಿದ್ಧ ಸರ್ವಶಕ್ತ್ಯತ್ಮಕ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್‌ಎಲ್‌ಎನ್ ಅಶ್ವತ್ ನಾರಾಯಣ ನೇತೃತ್ವದಲ್ಲಿ ಹನ್ನೊಂದನೇ ವಾರ್ಷಿಕೋತ್ಸವದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶ್ರೀ ಸರ್ವಶಕ್ತ್ಯಾತ್ಮಕ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ವಾರ್ಷಿಕೋತ್ಸವ ನಡೆದುಕೊಂಡು ಬರುತ್ತಿದೆ. ತಾಯಿ ಆಶೀರ್ವಾದ, ದೇವಿ ಕೃಪೆ ಪ್ರತಿ ಭಕ್ತರಿಗೆ ಅನುಕೂಲವಾಗಿದೆ. ೧೧ ವರ್ಷ ಹೇಗೆ ಕಳೆದಿದೆ ಎಂಬುವುದು ಆಶ್ಚರ್ಯವಾಗುತ್ತಿದೆ. ಬಹಳ ವಿಜೃಂಭಣೆಯಿಂದ ನೆರವೇರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ನಾಳೆ ಬೆಳಿಗ್ಗೆ ೭ ಗಂಟೆಯಿಂದ ದೇವಿಗೆ ಗಂಗಾಪೂಜೆ, ಮಹಾ ಸಂಕಲ್ಪ, ಮಹಾಭಿಷೇಕ, ಗಣಹೋಮ, ಕುಂಕುಮಾರ್ಚನೆ, ಚಂಡಿಕಾ ಪಾರಾಯಣ, ರಾತ್ರಿ ೮ ಗಂಟೆಗೆ ಮಹಾ ಮಂಗಳಾರತಿ, ಮೇ ಶುಕ್ರವಾರ೧೦ರಂದು ಅಮ್ಮನವರ ಪ್ರತಿಷ್ಠಾಪನಾ ದಿನ ಮತ್ತು ಅಕ್ಷಯ ತೃತೀಯ ಮಹಾದಿನ ಇರುವುದರಿಂದ ಹನ್ನೊಂದನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತೆ. ನವ ಚಂಡಿಕಾ ಹೋಮ, ಪಂಜುರ್ಲಿ ದೈವ ಅಲಂಕಾರ ನಂತರ ಅನ್ನಸಂತರ್ಪಣೆ, ಅಶ್ವಥ್ ಗುರೂಜಿ ಮತ್ತು ಪರಶುದಾಸ್ ಗುರೂಜಿ ತಂಡದಿಂದ ಸತ್ಸಂಗ ಭಜನೆ, ಚಿನ್ನಲೇಪಿತ ಅಮ್ಮನವರ ಉತ್ಸವ ಮೂರ್ತಿ ಮೆರವಣಿಗೆ ಇರುತ್ತದೆ ಎಂದು ದೇವಾಲಯ ಟ್ರಸ್ಟ್ ಕಾರ್ಯದರ್ಶಿ ಗಂಗಾದರ್ ತಿಳಿಸಿದರು. ಈ ವೇಳೆ ದೇವಾಲಯದ ಸದಸ್ಯ ಶ್ರೀರಾಮಯ್ಯ, ರಾಜಣ್ಣ, ಜಯರಾಮ್, ಹನುಮಂತಪ್ಪ, ಸೇರಿದಂತೆ ಪದಾಧಿಕಾರಿಗಳು ಇದ್ದರು.