ನಾಳೆ ಚೈತ್ರೋತ್ಸವ ಕಾರ್ಯಕ್ರಮ; ಡಾ.ಪಿಎಸ್ ಶಂಕರ ಚಿಗುರು ಚಿನ್ಮಯ ಪ್ರಶಸ್ತಿ ಪ್ರದಾನ

ಕಲಬುರಗಿ,ಏ.8- ಪ್ರತಿವರ್ಷದಂತೆ ಈ ವರ್ಷವೂ ಕೂಡ ಯುಗಾದ ಹಬ್ಬದ ಪ್ರಯುಕ್ತ ಡಾ.ಪಿಎಸ್ ಶಂಕರ ಪ್ರತಿಷ್ಠಾನ, ರೋಟರಿ ಕ್ಲಬ್ ಮತ್ತು ದಕ್ಷಿಣ ಕನ್ನಡ ಸಂಘದ ಆಶ್ರಯದಲ್ಲಿ ನಾಳೆ ಬೆಳಿಗ್ಗೆ 10ಗಂಟೆಗೆ ನಗರದ ರೋಟರಿ ಕ್ಲಬ್ ಶಾಲೆಯ ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ ಚೈತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಂಗೀತ, ನಾಟ್ಯ, ಬಾಲ ಪ್ರತಿಬೇ, ಕ್ರೀಡೆ ಸಂಶೋಧÀನೆ ಮತ್ತು ಸಾಧಕರನ್ನು ಗುರುತಿಸಿ ಈ ಕಾರ್ಯಕ್ರಮದಲ್ಲಿ ಡಾ.ಪಿಎಸ್ ಶಂಕರ ಚಿಗುರು ಚಿನ್ಮಯ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಮೋಹನ ಸೀತನೂರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು, ರೋಟರಿ ಕ್ಲಬ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಮೇಳಕುಂದಿ , ದಕ್ಷಣಿ ಕನ್ನಡ ಸಂಘದ ಗೌರವ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಡಾ.ಪಿಎಸ್ ಶಂಕರ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ.ಎಚ್.ವೀರಭದ್ರಪ್ಪ ಅಧ್ಯಕ್ಷತೆ ವಹಿಸುವರು.
ಪ್ರತಿಷ್ಠಿತ ಡಾ.ಪಿಎಸ್ ಶಂಕರ ಚಿಗುರು ಚಿನ್ಮಯ ಪ್ರಶಸ್ತಿ ಪುರಸ್ಕøತ ಸಾದಕರಾದ ಸಹನಾ ರೆಡ್ಡಿ ಭರತ ನಾಯ, ಪ್ರೀತಮ ಮಕ್ಕಳ ಸಾಹಿತ್ಯ, ಸೈಯದ ರಫಿ ಹುಸೇನ ಕ್ರೀಡೆ, ಶಿವಾನಿ ಶಿವದಾಸ ಸ್ವಾಮಿ ಸಂತೀತ, ಕಾವೇರಿ ಬಾಲ ವಿಜ್ಞಾನ ಇವರೆಲ್ಲರಿಗೆ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಬಡಶೇಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.