
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.19: ತಾಲ್ಲೂಕಿನ ಸುಕ್ಷೇತ್ರ ಚೇಳ್ಳಗುರ್ಕಿಯಲ್ಲಿ ಶ್ರೀ ಎಱ್ರಿತಾತನವರ ಜೀವ ಸಮಾಧಿ ಶತಮಾನೋತ್ಸವ ಹಾಗೂ ಜಾತ್ರಾ ಮಹೋತ್ಸವದ ಪ್ರಯುಕ್ತ ನಾಳೆ ಶನಿವಾರ ಬೆಳಿಗ್ಗೆ 5:30ಕ್ಕೆ ಗಂಗೆ ತರುವುದು 6:30 ರಿಂದ ಹೋಮದೊಂದಿಗೆ ವಿಶೇಷ ಪೂಜೆಗೆ ಮಠದ ಆವರಣದಲ್ಲಿ ಶ್ರೀ ಎರ್ರಿಸ್ವಾಮಿ ಜೀವ ಸಮಾಧಿ ಟ್ರಸ್ಟ್ ಹಾಗೂ ಶ್ರೀ ಎರ್ರಿಸ್ವಾಮಿ ದಾಸೋಹ ಸೇವಾ ಸಂಘದಿಂದ ಸಕಲ ಸಿದ್ಧತೆ ಸಡಗರ ಸಂಭ್ರಮದಿಂದ ಸಾಗುತ್ತಿದೆ.ಒಂದು ಕಡೆ ಎರಡನೇ ದಿನದ ಸಪ್ತಭಜನೆಯಲ್ಲಿ ಟಿ. ಬೂದಿಹಾಳ್,ಜೋಳದರಾಶಿ,ಏಳುಬೆಂಚೆ ಹಾಗೂ ಮುಷ್ಠಗಟ್ಟ ಗ್ರಾಮಗಳು ಪಾಲ್ಗೊಂಡಿದ್ದರೆ ಮತ್ತೊಂದು ಕಡೆ ಅಮವಾಸ್ಯೆ ಪ್ರಯುಕ್ತ
ಸಾವಿರಾರು ಭಕ್ತರು ತಾತನ ದರ್ಶನ ಪಡೆಯುತ್ತಿರುವುದು ನೋಡಿ ಎಂತಹವರ ಮನಸ್ಸು ಕೂಡ ತಾತನವರ ಪಾದಗಳಿಗೆ ಭಕ್ತಿ ಸಮರ್ಪಿಸುವುದು ಕಂಡುಬರುತ್ತಿತ್ತು.
ನಾಳೆ ನಡೆಯುವ ಶತಮಾನೋತ್ಸವ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯವನ್ನು ಆಂಧ್ರಪ್ರದೇಶ ಉರವಕೊಂಡ ಗವಿಮಠದ ಶ್ರೀ ಜಗದ್ಗುರು ಚನ್ನಬಸವರಾಜೇಂದ್ರ ಮಹಾಸ್ವಾಮಿಗಳು,ಶ್ರೀ ಮ.ನಿ.ಪ್ರ.ಡಾ.ಕರಿಬಸವರಾಜೇಂದ್ರ ಮಹಾಸ್ವಾಮಿಗಳು, ಸಂಡೂರು ವಿರಕ್ತ ಮಠದ ಶ್ರೀ ಮ.ನಿ.ಪ್ರ.ಪ್ರಭುಸ್ವಾಮಿಗಳು,ಕಮ್ಮರಚೇಡಿನ ಕಲ್ಯಾಣ ಸ್ವಾಮಿ ಮಠದ ಶ್ರೀ ಮ.ನಿ.ಪ್ರ.ಕಲ್ಯಾಣ ಮಹಾಸ್ವಾಮಿಗಳು, ಕಲ್ಲುಹೊಳೆಮಠದ ತಪೋರತ್ನ ಶ್ರೀ ಷ.ಬ್ರ.ಚೆನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹಂಪಿಯ ಹೇಮಕೂಟ ಆಶ್ರಮದ ಅವಧೂತ ಸ್ತೋ.ಪ್ರ.ವಿದ್ಯಾನಂದ ಭಾರತಿ ಸ್ವಾಮಿಗಳು ವಹಿಸಿದರೆ.ವೀರಶೈವ ವಿದ್ಯಾವರ್ಧಕ ಸಂಘ,ಬಳ್ಳಾರಿ ಅಧ್ಯಕ್ಷ ಆರ್. ರಾಮನಗೌಡ ಉದ್ಘಾಟಿಸುವರು.ಕಾರ್ಯಕ್ರಮ ಅಧ್ಯಕ್ಷತೆಯನ್ನು ಟ್ರಸ್ಟ್ ಕಮಿಟಿ ಅಧ್ಯಕ್ಷ ಎಚ್. ಬಾಳನಗೌಡ ಹಾಗೂ ದಾಸೋಹ ಸೇವಾ ಸಂಘದ ಅಧ್ಯಕ್ಷ ಸಿ.ಕೆ.ಪೊಂಪನಗೌಡ ವಹಿಸುವರು. ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಸಂಘಟಕರು ಮನವಿ ಮಾಡದ್ದಾರೆ.