ನಾಳೆ ಘಟಿಕೋತ್ಸವ ಡಾಕ್ಟರೇಟ ಪದವಿ ಪ್ರಧಾನ

ಗದಗ,ಮಾ9 : ಗದಗ ಜಿಲ್ಲೆಯ ನಾಗಾವಿ ಗ್ರಾಮದಲ್ಲಿರುವ ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಸಭಾಭವನದಲ್ಲಿ ಮೂರನೇ ಘಟೀಕೋತ್ಸವ ಕಾರ್ಯಕ್ರಮ ನಾಳೆ ಬೆಳಿಗ್ಗೆ 9.30ಕ್ಕೆ ಜರುಗಲಿದೆ ಎಂದು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ ತಿಳಿಸಿದರು.
ಗದಗ ನಗರದಲ್ಲಿನ ರೈತ ಭವನದಲ್ಲಿ ವಿ.ವಿ.ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನೇದ್ದೇಶಿಸಿ ಮಾತನಾಡಿದ ಅವರು, ವಿಶ್ವ ವಿದ್ಯಾಲಯದ ಕುಲಾಧಿಪತಿಗಳು ಹಾಗೂ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪದವಿ ಪ್ರಧಾನ ಮಾಡಲಿದ್ದಾರೆ. ಇಂಫಾಲ್ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ಸುಬ್ಬಣ್ಣ ಅಯ್ಯಪ್ಪನ್ ಅವರು ಘಟೀಕೋತ್ಸವದ ಭಾಷಣ ಮಾಡಲಿದ್ದಾರೆ ಎಂದರು.
ವಿಶ್ವವಿದ್ಯಾಲಯದ 10 ವಿವಿಧ ಸ್ನಾತ್ತಕೋತ್ತರ ಕಾರ್ಯಕ್ರಮಗಳ 192 ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ಪದವಿಗಳನ್ನು ಪ್ರಧಾನ ಮಾಡಲಾಗುವದು. ವಿವಿಧ ಸ್ನಾತ್ತಕೋತ್ತರ ವಿಭಾಗಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ 10 ಸಾಧಕರಿಗೆ ಚಿನ್ನದ ಪದಕ ನೀಡಲಾಗುವುದು. ಎರಡು ಮತ್ತು ಮೂರನೇ ರ್ಯಾಂಕ್ ಗಳಿಸಿದ ತಲಾ ಹತ್ತು ಮಂದಿಗೆ ಮೆರಿಟ್ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ವಿವಿಧ ಸ್ನಾತ್ತಕೋತ್ತರ ವಿಭಾಗಗಳಲ್ಲಿ ಉತ್ತಮ ಅಂಕ ಗಳಿಸಿದ ಪ್ರೀತಂ.ಸಿ.ಜಿ., ದಿವ್ಯ ಬಿ.ಯು., ಚಿದಾನಂದ ಆಶ್ಯಾಳ, ವೀಣಾ ಭಜಂತ್ರಿ, ಕೆ.ಆರ್.ಮೋಹನ, ಎಸ್. ತೇಜಸ, ಪ್ರಿಯಾ ನೀರಲಕಟ್ಟಿ, ಶೋಭಾ ಪೂಜೆರ, ಪೂಜಾ ಕಣವಿ, ಅಫ್ರಿನಸನಾ ಹಂಪಾಪಟ್ಟಣ ಅವರುಗಳಿಗೆ ಚಿನ್ನದ ಪದಕಗಳನ್ನು ವಿತರಿಸಲಾಗುವುದು ಎಂದರು.
ಪ್ರಥಮ ರ್ಯಾಂಕ್ ಪಡೆದವರಿಗೆ ಕೆ.ಎಚ್.ಪಾಟೀಲ ಪ್ರತಿಷ್ಠಾನ ಸ್ಥಾಪಿಸಿದ ಚಿನ್ನದ ಪದಕಗಳನ್ನು ಎಂ.ಬಿ.ಎ ಕಾರ್ಯಕ್ರಮಕ್ಕೆ, ಶ್ರೀ ರಾಜೇಂದ್ರ ಸಿಂಗ್ ಚಿನ್ನದ ಪದಕ ಜಿಯೋ ಇನ್ಫಮ್ರ್ಯಾಟಿಕ್ಸಗೆ, ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ, ನಾಡೋಜ ಡಾ.ಅನ್ನದಾನಿಶ್ವರ ಮಹಾಸ್ವಾಮಿಜಿ, ಚಿನ್ನದ ಪದಕ ಎಂ.ಎ.(ಸಾರ್ವಜನಿಕ ಆಡಳಿತ), ಕೆ.ವಿ.ಹಂಚಿನಾಳ ಫೌಂಡೇಶನ್ ಮುಂಡರಗಿ ಚಿನ್ನದ ಪದಕ, ಎಂ.ಎಸ್.ಡಬ್ಲೂ, ಶ್ರೀಮತಿ ಫ್ಯಾನ್ಸಿಬಾಯಿ ಪ್ರಕಾಶ್ ಜಿ. ಶಾ ಗದಗ ಚಿನ್ನದ ಪದಕ ಎಂ.ಕಾಂ ಕಾರ್ಯಕ್ರಮಗಳಿಗೆ ಮತ್ತು ಡಾ. ರಾಮಚಂದ್ರ ಜಾಲಿಹಾಳ ಚಿನ್ನದ ಪದಕ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮದಲ್ಲಿ ಸ್ನಾತ್ತಕೋತ್ತರ ಪದವಿಗಾಗಿ ಚಿನ್ನದ ಪದಕಗಳನ್ನು ನೀಡಲಾಗುವುದು.
ಗೌರವ ಡಾಕ್ಟರೇಟ್: ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವದ ಸಮಾರಂಭದಲ್ಲಿ ಇಬ್ಬರೂ ಮಹನೀಯರಿಗೆ ಗೌರವ ಡಾಕ್ಟರೇಟ ಪ್ರಧಾನ ಮಾಡಲಾಗುವುದು. ಬೆಳಗಾವಿ ಜಿಲ್ಲೆಯ ಕಟ್ಟಣಭಾವಿ ಗ್ರಾಮದ ಗಾಂಧೀವಾದಿ ಮತ್ತು ಹಿರಿಯ ಸಮಾಜಿಕ ಕಾರ್ಯಕರ್ತರಾದ ಶಿವಾಜಿ ಕಾಗಣಿಕರ ಮತ್ತು ನಾಲ್ಕು ದಶಕಗಳಿಂದ ಸಾವಯವ ಕೃಷಿಯಲ್ಲಿ ತೊಡಗಿರುವ ಮೈಸೂರು ಜಿಲ್ಲೆಯ ಕಳಲ್ವಾಡಿ ಗ್ರಾಮದ ಎ ಪಿ ಚಂದ್ರಶೇಖರ್ ಅವರುಗಳಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಿದ್ದಾರೆಂದು ಪೆÇ?ರೀ ವಿಷ್ಣುಕಾಂತ ಚಟಪಲ್ಲಿ ತಿಳಿಸಿದರು.
ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಕುಲಸಚಿವ ಬಸವರಾಜ ಲಕ್ಕಣ್ಣನವರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.