ನಾಳೆ ಗ್ರಾಮ ಪಂಚಾಯತಿ ಚುನಾವಣೆ

ಸಂಡೂರು ;ಡಿ:26 2ನೇ ಹಂತದ ಗ್ರಾಮ ಪಂಚಾಯತಿ ಚುನಾವಣೆ ನಾಳೆ ಅಂದರೆ, ಭಾನುವಾರ ಬೆಳಿಗ್ಗೆ 7.00 ರಿಂದ ಸಂಜೆ 5.00ರ ವರೆಗೆ ನಡೆಯಲಿದ್ದು, ಸಕಲ ಸಿದ್ದತೆಗಳು ಸುಗಮವಾಗಿ ಸಾಗುತಲಿದ್ದು, 80 ಸೂಕ್ಷ್ಮ 26 ಅತೀ ಸೂಕ್ಷ್ಮ 143 ಸಾಮಾನ್ಯ ಪ್ರದೇಶವಾಗಿದ್ದು, 249 ಮತಗಟ್ಟೆಗಳಿಗೆ 250 ಪಿ.ಆರ್.ಓ.ಗಳು 250 ಎ.ಪಿ.ಆರ್.ಓಗಳು ಇದಕ್ಕೆ ಹೊರತಾಗಿ ಶೇ. 10ರಷ್ಟು ಸಿಬ್ಬಂದಿ ರಿಜಸವೇಶನ್ ಆಗಿ ಇಟ್ಟುಕೊಳ್ಳಲಾಗಿದೆ. ಪ್ರತಿ ಮತಗಟ್ಟೆಗೆ 5 ಸಿಬ್ಬಂದಿಯನ್ನ ನೇಮಿಸಲಾಗಿದೆ. ಇವೆಲ್ಲವಕ್ಕೂ ಮೀರಿ ಏನಾದರೂ ಗುಮಾನಿ ಬಂದಲ್ಲಿ ತಕ್ಷಣ ಸಂಪರ್ಕಿಸಲು ಚುನಾವಣಾ ಅಧಿಕಾರಿಗಳು, ತಾಲ್ಲೂಕು ದಂಡಾಧಿಕಾರಿಗಳು ಆದ ಎಚ್.ಜಿ. ರಶ್ಮಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.