ನಾಳೆ ಗೋಪನಾಳ್ ಗ್ರಾಮದಲ್ಲಿ ದೇವಸ್ಥಾನದ ಉದ್ಘಾಟನೆ


ದಾವಣಗೆರೆ. ನ.೧೧; ತಾಲ್ಲೂಕಿನ ಗೋಪನಾಳ್ ಗ್ರಾಮದಲ್ಲಿ  ನೂತನವಾಗಿ ನಿರ್ಮಾಣವಾಗಿರುವ ಶ್ರೀ ದುಗ್ಗಮ್ಮ ದೇವಿ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ,ನೂತನ ಗೋಪುರ ಕಳಾಸಾರೋಹಣ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭ ನಾಳೆ ಬೆಳಗ್ಗೆ ೯ ಕ್ಕೆ ಜರುಗಲಿದೆ ಎಂದು ಕನ್ನಡ ಶಿಕ್ಷಕರಾದ ಮುರುಗೇಂದ್ರಯ್ಯ ಹೇಳಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ನಾಳೆ ಬೆಳಗ್ಗೆ ೯ ರಿಂದ ನಡೆಯುವ ಕಾರ್ಯಕ್ರಮದಲ್ಲಿ ಆವರಗೊಳ್ಳ ಪುರವರ್ಗಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.ಗ್ರಾ.ಪಂ ಅಧ್ಯಕ್ಷೆ ಫಾತಿಮಾ ಬಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಮಂಜುನಾಥ್ ಕುರ್ಕಿ ಉದ್ಘಾಟನೆ ನೆರವೇರಿಸಲಿದ್ದಾರೆ.ಗೋಪನಾಳು ಕಾಲೇಜಿನ ಕನ್ನಡ ಉಪನ್ಯಾಸಕ ಓಹಿಲೇಶ್ವರ ಆಶಯನುಡಿಗಳನ್ನಾಡಲಿದ್ದಾರೆಂದರು.ನಾಳೆ ಬೆಳಗಿನ ಜಾವ ಶಿಲಾಮೂರ್ತಿಗೆ ರುದ್ರಾಭಿಷೇಕ,ವಿಶೇಷ ಅಲಂಕಾರ,ಪೂಜಾ ಅಷ್ಟೋತ್ತರ ಕುಂಕುಮಾರ್ಚನೆ ಶ್ರೀಗಳ ನೇತೃತ್ವದಲ್ಲಿ ಜರುಗಲಿದೆ. ಇಂದು ಸಂಜೆ ೫ ಕ್ಕೆ ಗಂಗಾಪೂಜೆಯೊಂದಿಗೆ ದೇವಸ್ಥಾನ ಪ್ರವೇಶ,ಹೋಮ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿ.ಕರಿಬಸಪ್ಪ,ಕೆ.ಎಸ್ ನಾಗಭೂಷಣ್,ಬಸವರಾಜಪ್ಪ,ಶೇಖರಪ್ಪ ಇದ್ದರು.