
ಚಿಂಚೋಳಿ,ಮಾ 10: ತಾಲೂಕಿನ ಪೆÇೀಲಕಪಳ್ಳಿ ಗ್ರಾಮದ ಮಲ್ಲಿಕಾರ್ಜುನ ಹಿತ್ತಲರವರ ತೋಟದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘ ಕಲಬುರಗಿ ವತಿಯಿಂದ ತಾಲೂಕಿನ ಆಸಕ್ತಿಯುಳ್ಳ ರೈತರಿಗೆ ಗೋಕೃಪಾಮೃತ ಕೃಷಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ತಾಲೂಕ ಸಂಚಾಲಕ ಕಾಶೀನಾಥ ಮಡಿವಾಳ ತಿಳಸಿದ್ದಾರೆ.
ಕಲಬುರಗಿ ಕೃಷಿ ವಿಜ್ಞಾನ ಕೇಂದ್ರ ತಜ್ಞರಾದ ಸುಧೀಂದ್ರ ದೇಶಪಾಂಡೆ, ತುಕಾರಾಂ ಪವಾರ ಮಾರ್ಗದರ್ಶನ ಮಾಡಲಿದ್ದಾರೆ.ಪೋಲಕಪಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಸೈದ್ ಜಾಕಿರ್ ಸಾಬ್ ಉದ್ಘಾಟಿಸುವರು, ಕೃಷಿ ಉಪ ಸಮಿತಿ ಅಧ್ಯಕ್ಷ ವಿ ಶಾಂತರೆಡ್ಡಿ, ಉಪಾಧ್ಯಕ್ಷರಾದ ಮಂಜುಳಾ ಹಣಮಂತ, ಪ್ರಗತಿಪರ ರೈತರಾದ ಶಿವರಾಜ್ ಪಾಟೀಲ್, ನಂದಿಕುಮಾರ ಪಾಟೀಲ್, ಗ್ರಾಪಂಅಭಿವೃದ್ಧಿ ಅಧಿಕಾರಿ ಚನ್ನಾವೀರಪ ನಗನೂರ್ ಇರುವರು . ಈ ಸಂಧರ್ಭದಲ್ಲಿ ಸಂಚಾಲಕರುಗಳಾದ ಶಂಕರ ಜಡಾಲ್, ವಿದ್ಯಾಸಾಗರ ಚಿಟ್ಟಾ, ವೀರಶೆಟ್ಟಿ ಸುಂಟಾಣ, ಬಸವರಾಜ ಟೈಗರ್, ಭೀಮರಾಯ ಸುಲೇಪೇಟ, ವೀಣಾ ಕೊರವಿ ಉಪಸ್ಥಿತರಿರುವರು.