ನಾಳೆ ಗುರು ಪಟ್ಟಾಧಿಕಾರ ಅಂಗವಾಗಿ ಬೃಹತ್ ಯುವಜನೋತ್ಸವ

ತಾಳಿಕೋಟೆ:ಫೆ.23: ತಾಲೂಕಿನ ನಾವದಗಿ ಗ್ರಾಮದ ರಾಜಗುರು ಶ್ರೀ ಪರ್ವತೇಶ್ವರ ಸಂಸ್ಥಾನ ಬೃಹನ್ಮಠದ ಶ್ರೀ ರಾಜೇಂದ್ರ ಒಡೆಯರ ದೇವರ ಗುರು ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಬೃಹತ್ ಯುವ ಜನೋತ್ಸವ ಕಾರ್ಯಕ್ರಮವು ಇದೇ ದಿ. 24 ಶನಿವಾರರಂದು ಜರುಗಲಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಕೊಡೇಕಲ್ಲ ಶ್ರೀ ದುರದುಂಡೇಶ್ವರ ವಿರಕ್ತಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ವಹಿಸುವರು.
ದಿಕ್ಸೂಚಿ ಭಾಷಣಕಾರರಾಗಿ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಆಗಮಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಲೋಕಾಯುಕ್ತರು ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ ಅವರು ನೇರವೇರಿಸುವರು.
ವಿಶೇಷ ಅಹ್ವಾನಿತರಾಗಿ ಬೆಂಗಳೂರಿನ ಡಿ.ಎಸ್.ಮ್ಯಾಕ್ಸ್ ಕಂಪನಿಯ ಮಾಲಿಕರಾದ ಎಸ್.ಪಿ.ದಯಾನಂದ ಅವರು ಆಗಮಿಸುವರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಯುವ ಸಾಧಕರಾದ ಸ್ಕೇಟಿಂಗ್ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಚಂದ್ರಶೇಖರ ಬಸರಕೋಡ, ಯುವ ಉದ್ಯಮಿ ಭರತಗೌಡ ಪಾಟೀಲ(ನಡಹಳ್ಳಿ), ದೇವರ ಹಿಪ್ಪರಗಿ ಯುವ ಮುಖಂಡ ಸಂಗನಗೌಡ ಪಾಟೀಲ(ಸಾಸನೂರ) ಅವರಿಗೆ ಸನ್ಮಾನಿಸಿ ಗೌರವಿಸಲಾಗುವದೆಂದು ನಾವದಗಿ ಹಿರೇಮಠದ ಶ್ರೀ ರಾಜೇಂದ್ರ ಒಡೆಯರ ದೇವರು ಪ್ರಕಟನೆ ಮೂಲಕ ತಿಳಿಸಿದ್ದಾರೆ.
ಈಗಾಗಲೇ ಈ ಶ್ರೀಗಳ ಗುರು ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಫೇಬ್ರವರಿ 7 ರಿಂದ ಸಾಯಂಕಾಲ 6 ಗಂಟೆಯಿಂದ ಕಲಬುರ್ಗಿಯ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಮಹಾ ಪುರಾಣ ಪ್ರವಚನವು ಪ್ರವಚನಕಾರರಾದ ಗದಗ ವಿರೇಶ್ವರ ಪ್ಮಣ್ಯಾಶ್ರಮದ ಪಂಡಿತ ವೇ.ಶಶಿಧರ ಶಾಸ್ತ್ರೀಗಳು ಹಿರೇಮಠ ಡೋಣಿ ಅವರಿಂದ ನೇರವೇರುತ್ತಿದ್ದು ಕಾರಣ ತಾಲೂಕಿನ ಸಖಲ ಭಕ್ತಾಧಿಗಳು ಈ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟನೆ ತಿಳಿಸಿದೆ.