ನಾಳೆ ಕೌಲ್ ಬಜಾರ್ ಪ್ರದೇಶದಲ್ಲಿ ಶ್ರೀರಾಮುಲು ಚುನಾವಣಾ ಸಭೆ

ಬಳ್ಳಾರಿ, ಏ.03: ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ನಾಳೆ ಏ.4ರಂದು ನಗರದ ಕೌಲ್ ಬಜಾರ್ ಪ್ರದೇಶದ ವಿವಿಧ ವಾರ್ಡುಗಳಲ್ಲಿ ಚುನಾವಣೆ ಅಂಗವಾಗಿ ಅಭ್ಯರ್ಥಿಗಳ ಆಯ್ಕೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಪ್ರವಾಸ ಕೈಗೊಂಡಿದ್ದಾರೆ.
ಇವರೊಂದಿಗೆ ಮಾಜಿ ಸಂಸದರಾದ ಸಣ್ಣ ಪಕ್ಕೀರಪ್ಪ, ಶಾಂತಾ, ಮಾಜಿ ಶಾಸಕ ಸುರೇಶ್ ಬಾಬು, ಕೌಲ್ ಬಜಾರ್ ಮಂಡಲ ಅಧ್ಯಕ್ಷ ಗೌಳಿ ಶಂಕ್ರಪ್ಪ, ಮಾಜಿ ಉಪಮೇಯರ್ ಗೋವಿಂದರಾಜುಲು, ಬುಡಾ ಮಾಜಿ ಅಧ್ಯಕ್ಷ ಡಿ.ವಿನೋದ್, ಮುಖಂಡರುಗಳಾದ ಎ.ಎಂ.ಸಂಜಯ್, ಹೊನ್ನೂರುಸ್ವಾಮಿ, ನೂರ್ ಬೈ, ವೆಂಕಟೇಶ್, ರಂಜಿತ್ ಮೊದಲಾದ ಮುಖಂಡರು ಪ್ರವಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ಬಂಡಿಹಟ್ಟಿಯಿಂದ ಶ್ರೀರಾಮುಲು ಅವರ ಪ್ರವಾಸ ಆರಂಭವಾಗಲಿದೆ. ನಂತರ 10 ಗಂಟೆಗೆ ರಾಮಾಂಜಿನೇಯ ನಗರ, 11ಕ್ಕೆ ವಟ್ಟೆಪ್ಪಗೇರಿ, ಮಧ್ಯಾಹ್ನ 12ಕ್ಕೆ ಬಿಸಟ್ಟಿಗೇರಿ 12.30ಕ್ಕೆ, ಟಿ.ಸಿ.ಹೆಚ್. ಕಾಲೇಜ್ ಬಳಿಯ ಉರ್ದು ಶಾಲೆ, 1 ಗಂಟೆಗೆ ಕೌಲ್ ಬಜಾರ್ ಬಿಜೆಪಿ ಕಛೇರಿ, ಸಂಜೆ 3ಕ್ಕೆ ಪಾಂಡುರಂಗ ದೇವಸ್ಥಾನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಪಕ್ಷದ ಮುಖಂಡ ಸಂಜಯ್ ಬೆಟಗೇರಿ ತಿಳಿಸಿದ್ದಾರೆ.