ನಾಳೆ ಕುರುಬ ಸಮಾಜದಿಂದ ಹೋರಾಟ

ಚಿತ್ತಾಪುರ:ಡಿ.27: ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ-ತಿಂಥಣಿ ಬ್ರಿಜ್. ಗೊಂಡ್- ಕುರುಬ ಹೋರಾಟ ಸಮಿತಿ ಜಿಲ್ಲಾ/ತಾಲ್ಲೂಕು ಗೊಂಡ್-ಕುರುಬ ಸಂಘ ಮತ್ತು ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ‘ಗೊಂಡ್’ ಪರ್ಯಾಯ ಪದ ‘ಕುರುಬ’ ಎಂದು ಪರಿಗಣಿಸಲು ಕೇಂದ್ರ ಸರಕಾರಕ್ಕೆ ಒತ್ತಾಯಿಸಿ ಪಟ್ಟಣದ ಕನಕ ಭವನದಿಂದ ತಹಸಿಲ್ದಾರ್ ಕಛೇರಿ ವರಿಗೆ ಡಿಸೆಂಬರ್ 28ರಂದು ಬೆಳ್ಳಿಗೆ 11 ಗಂಟೆಗೆ ಹೋರಾಟವನ್ನು ಹಮ್ಮಿಕೊಂಡಿದ್ದು ಈ ಹೋರಾಟಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟ ಯಶಸ್ವಿಗೊಳಿಸಲು ಸಮಾಜದ ತಾಲ್ಲೂಕು ಅಧ್ಯಕ್ಷರಾದ ಬಸವರಾಜ ಹೊಸಳ್ಳಿ, ಹಾಗೂ ಕಾರ್ಯದರ್ಶಿ ಮಲ್ಲಿಕಾರ್ಜುನ್ ಪೂಜಾರಿ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸಮಾಜದ ಸಮಾಜದ ಮುಖಂಡರಾದ ಯಾಲ್ಲಾಲಿಂಗ ಪೂಜಾರಿ, ಮಲ್ಲಿಕಾರ್ಜುನ್ ಪೂಜಾರಿ, ಪ್ರಭು ಗಂಗಾಣಿ, ಸಂತೋಷ ಪೂಜಾರಿ, ಜಗನ್ನಾಥ ಪೂಜಾರಿ, ನಾಗೇಶ್ ಪೂಜಾರಿ, ಬೋಜು ಶೇರಿ, ಯಲ್ಲಾಲಿಂಗ ಪೂಜಾರಿ, ಬೀರಲಿಂಗ ಪೂಜಾರಿ, ಸೇರಿದಂತೆ ಇತರರು ಇದ್ದರು.