ನಾಳೆ ಕುರುಗೋಡಿಗೆ ಸಿದ್ದರಾಮಯ್ಯ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.25: ಜಿಲ್ಲೆಯ ಕಂಪ್ಲಿ ಕ್ಷೇತ್ರದ  ಕುರುಗೋಡು  ಪಟ್ಟಣಕ್ಕೆ  ಮಾಜಿ ಮುಖ್ಯ ಮಂತ್ರಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ನಾಳೆ ಏ‌.26 ರಂದು ಸಂಜೆ 3 ಕ್ಕೆ ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡಲು ಆಗಮಿಸುತ್ತಿದ್ದಾರೆ.
ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ಜೆ.ಎನ್.ಗಣೇಶ್ ಅವರ ಪರ ಸಿದ್ದರಾಮಯ್ಯ ಅವರು ಮತಯಾಚನೆ ಮಾಡಲಿದ್ದಾರೆ.
ಸಭೆ ಕುರುಗೋಡಿನ ಕಂಪ್ಲಿ ರಸ್ತೆಯ ಪೆಟ್ರೋಲ್ ಬಂಕ್ ಹಿಂಭಾಗದ ಪ್ರದೇಶದಲ್ಲಿ ನಡೆಯಲಿದೆ. ಕಾಂಗ್ರೆಸ್ ಪಕ್ಷದ ಹಲವು ರಾಜ್ಯ ಮುಖಂಡರು, ಮುಂಚೂಣಿ ಘಟಕಗಳ ನಾಯಕರು ಪಾಲ್ಗೊಳಲಿದ್ದಾರೆ‌.
ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ  ಪಾಲ್ಗೊಳ್ಳಲು ಶಾಸಕ ಗಣೇಶ್ ಕೋರಿದ್ದಾರೆಂದು  ಕಂಪ್ಲಿ ಕ್ಷೇತ್ರದ ವಕ್ತಾರ ಕುರುಗೋಡು ಚನ್ನಬಸವರಾಜ್ ಗೌಡ ತಿಳಿಸಿದ್ದಾರೆ