ನಾಳೆ ಕುಡುತಿನಿಯ ಹ.ಬ. ಕಾಲೇಜಿನ  ಬೆಳ್ಳಿ ಹಬ್ಬದ ಸಂಭ್ರಮ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.09: ಇಲ್ಲಿನ ವೀರಶೈವ ವಿದ್ಯಾವರ್ಧಕ  ಸಂಘದ ಆಡಳಿತಕೊಳ್ಳಪಟ್ಟ ತಾಲೂಕಿನ ಕುಡುತಿನಿ ಪಟ್ಟದಲ್ಲಿರುವ ಹರಗಿನಡೋಣಿ ಬಸವನಗೌಡ ಸಂಯುಕ್ತ ಪ.ಪೂ ಕಾಲೇಜು 25 ವರ್ಷಗಳನ್ನು ಪೂರೈಸಿದ್ದು. ಇದರ ಸವಿನೆನಪಿಗಾಗಿ  ನಾಳೆ ಮತ್ತು ನಾಡಿದ್ದು ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿದೆ.
ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ನಾಳೆ  ಬೆಳಗ್ಗೆ 6 ಕ್ಕೆ ಸಕಲ ಮಂಗಳವಾದ್ಯಗಳೊಂದಿಗೆ ಪೂರ್ಣ ಕುಂಭ ಮೇಳವನ್ನು ಆಯೋಜಿಸಿಲಾಗಿದೆ.  ನಂತರ 10 ಕ್ಕೆ ಬೆಳ್ಳಿ ಹಬ್ಬದ ಉದ್ಘಾಟನಾ ಸಮಾರಂಭ ಜರುಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವ  ಬಿ.ನಾಗೇಂದ್ರ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ಕಾರ್ಮಿಕ ಸಚಿವ ಸಂತೋಷಲಾಡ್,  ಶಾಸಕರಾದ ಈ. ತುಕರಾಂ, ಗಣೇಶ್ ,  ನಾರಾ ಭರತ್ ರೆಡ್ಡಿ, ಸಂಘದ ಅಧ್ಯಕ್ಷ ರಾಮನಗೌಡ ಮತ್ತಿತರ ಪದಾಧಿಕಾರಿಗಳು  ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ  ಸಾನಿದ್ಯವನ್ನು ಉಜ್ಜಯನಿ‌ ಜಗದ್ಗುರುಗಳು ಹಾಗೂ   ಹರ ಗುರು ಚರ ಮೂರ್ತಿಗಳು  ವಹಿಸಲಿದ್ದಾರೆ.  ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿರಲಿದ್ದಾರೆ.  ದಾನಿಗಳನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು   ಸನ್ಮಾನಿಸಿ ಗೌರವಿಸಲಾಗುತ್ತದೆ. ಸಂಜೆ  ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು. ಎರಡು ದಿನಗಳ ಕಾಲ ಜರುಗುವ ಕಾರ್ಯಕ್ರಮಗಳಿಗೆ ಆಗಮಿಸಬೇಕೆಂದು ಕಾಲೇಜಿನ ಆಡಳಿತ ಮಂಡಳಿ  ಅಧ್ಯಕ್ಷ ಏಳಬೆಂಚಿ ರಾಜಶೇಖರಗೌಡ ಮತ್ತು ಆಡಳಿತ ಮಂಡಳಿಯ ಸದಸ್ಯರಾದ  ಗುಡ್ಡದ ಕಲ್ಲು ವೀರನಗೌಡ ಗೋಟೂರು ಸಣ್ಣ ಜಂಭಣ್ಣ ಗಾಳಿ ಏಕಾಂಬ್ರಪ್ಪ, ಪಲ್ಲೇದ ನಾಗರಾಜ ಬಿ ಎಚ್ ಬಂಡೇಗೌಡ ಹಾಗೂ ಕಾರೆ ಗವಿಸಿದ್ದಪ್ಪ ಇವರು ಮನವಿ ಮಾಡಿದ್ದಾರೆ.