ನಾಳೆ ಕಿವೀಸ್-ಭಾರತ ಹಣಾಹಣಿ ಮಯಾಂಕ್‌ಗೆ ಕೊಕ್ ಸಾಧ್ಯತೆ

ಮುಂಬೈ, ಡಿ.೨- ಭಾರತ ಮತ್ತು ನ್ಯೂಜಿಲೆಂಡ್ ತಂಡದ ನಡುವಣ ೨ನೇ ಟೆಸ್ಟ್ ಪಂದ್ಯ ನಾಳೆ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯ ಕಂಡಿದ್ದು, ಭಾರತಕ್ಕೆ ತೀವ್ರ ನಿರಾಸೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಪಂದ್ಯ ಮಹತ್ವ ಪಡೆದುಕೊಂಡಿದೆ.
೨ನೇ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ತಂಡದ ಸಾರಥ್ಯ ವಹಿಸಲಿದ್ದಾರೆ. ಹೀಗಾಗಿ, ೧೧ ಮಂದಿ ಆಟಗಾರರ ಪಟ್ಟಿಯಲ್ಲಿ ಯಾರಿಗೆ ಅವಕಾಶ ನೀಡಬೇಕೆಂಬ ಬಗ್ಗೆ ಚರ್ಚೆಗಳು ನಡೆಯಲಿವೆ.


ಮೂಲಗಳ ಪ್ರಕಾರ ಕರ್ನಾಟಕದ ಮಯಾಂಕ್ ಅಗರ್‌ವಾಲ್ ಅವರನ್ನು ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ. ಕೊಹ್ಲಿಗೆ ಸ್ಥಾನ ಕಲ್ಪಿಸಬೇಕಾಗಿದ್ದು, ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಲು ಸಾಧ್ಯವಿಲ್ಲ.
ಮೊದಲ ಪಂದ್ಯದಲ್ಲಿ ಕೊಹ್ಲಿ ಅವರ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಅವರಿಗೆ ಅವಕಾಶ ನೀಡಲಾಗಿತ್ತು. ಅಯ್ಯರ್ ಮೊದಲ ಪಂದ್ಯದ ೨ ಇನ್ನಿಂಗ್ಸ್‌ನಲ್ಲಿ ಶತಕ ಮತ್ತು ಅರ್ಧ ಶತಕ ಬಾರಿಸಿದ್ದರು. ಆದ್ದರಿಂದ ಅವರನ್ನು ಕಣಕ್ಕಿಳಿಸಲೇಬೇಕಾಗಿದೆ. ಇದರಿಂದಾಗಿ ಕರ್ನಾಟಕದ ಅಗರ್‌ವಾಲ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ವೃದ್ಧಮಾನ್ ಸಾಹಾ ಅವರಿಗೆ ವಿಶ್ರಾಂತಿ ಕೊಟ್ಟು ಕೆ.ಎಸ್ ಭರತ್‌ಗೆ ಅವಕಾಶ ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಒಂದು ವೇಳೆ ಭರತ್‌ಗೆ ಅವಕಾಶ ದೊರೆತರೆ ಶುಭ್‌ಮನ್‌ಗಿಲ್ ಜತೆ ಆರಂಭಿಕ ಆಟಗಾರರಿಗೆ ಕಣಕ್ಕಿಳಿಯಲಿದ್ದಾರೆ.
ಚೇತೇಶ್ವರ ಪೂಜಾರ ೩ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ ಹಾಗೂ ವಿರಾಟ್‌ಕೊಹ್ಲಿ ೪ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ.
ವಾಂಖೆಡೆ ಕ್ರೀಡಾಂಗಣ ಸ್ಪಿನ್ ಬೌಲರ್‌ಗಳಿಗೆ ನೆರವಾಗಲಿದೆ. ಆತಿಥೇಯ ತಂಡಕ್ಕೆ ನೆರವಾಗುವಂತೆ ಪಿಚ್ ನಿರ್ಮಿಸಲಾಗಿದೆ ಎಂದು ಮುಂಬೈ ಕ್ರಿಕಟ್ ಸಂಸ್ಥೆ ಮೂಲಗಳು ತಿಳಿಸಿವೆ.
ಸಂಭವನೀಯ ಆಟಗಾರರು
ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯಾ ರಹಾನೆ, ಕೆ.ಎಸ್. ಭರತ್, ಶುಭ್‌ಮನ್‌ಗಿಲ್, ಚೇತೇಶ್ವರ ಪೂಜಾರ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಅಕ್ಷರ್ ಪಟೇಲ್, ಉಮೇಶ್ ಯಾದವ್, ಇಶಾಂತ್ ಶರ್ಮಾ ಅಥವಾ ಮೊಹಮ್ಮದ್ ಶಿರಾಜ್,