ನಾಳೆ ಕಾಮಗಾರಿಗಳ ಶಂಕುಸ್ಥಾಪನೆ

ಬಾದಾಮಿ,ಮಾ23: ಮಾ.24 ರಂದು ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆ, ವಿವಿದ ಕಾಮಗಾರಿಗಳ ಶಂಕುಸ್ಥಾಪನೆ, ಭೂಮಿ ಪೂಜಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಮುಖಂಡರಾದ ಹೊಳಬಸು ಶೆಟ್ಟರ, ಹನಮಂತ ಯಕ್ಕಪ್ಪನವರ, ಎಂ.ಬಿ.ಹಂಗರಗಿ, ರಾಜಮಹ್ಮದ ಬಾಗವಾನ, ಪಿ.ಆರ್.ಗೌಡರ, ಡಾ.ಎಂ.ಎಚ್.ಚಲವಾದಿ ಮಾತನಾಡಿ ರೂ.228 ಕೋಟಿ ವೆಚ್ಚದ ಬಾದಾಮಿ ಕೆರೂರ ಸೇರಿದಂತೆ 18 ಗ್ರಾಮಗಳ ಕುಡಿಯುವ ನೀರಿನ ಯೋಜನೆ, 64 ಕೋಟಿ ರೂ.ವೆಚ್ಚದ ವಿವಿದ ಲೋಕೋಪಯೋಗಿ ಇಲಾಖೆಯ ರಸ್ತೆ ಸುಧಾರಣೆ ಕಾಮಗಾರಿಗಳು, 100 ಕೋಟಿ ರೂ.ವೆಚ್ಚದ ಕುಡಿಯುವ ನೀರಿನ ಯೋಜನೆ ಸೇರಿದಂತೆ ಅಂದಾಜು 1000 ಕೋಟಿ ರೂ.ವೆಚ್ಚದ ವಿವಿದ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಭೂಮಿಪೂಜಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು, ಶಾಸಕ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಸಂಸದ ಪಿ.ಸಿ.ಗದ್ದಿಗೌಡರ ಸೇರಿದಂತೆ ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು ಭಾಗವಹಿಸುವರು. ಕಾರ್ಯಕ್ರಮದಲ್ಲಿ ಮತಕ್ಷೇತ್ರದಿಂದ ಸುಮಾರು 50 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲರಿಗೂ ಆಸನದ ವ್ಯವಸ್ಥೆ, ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪಕ್ಷಾತೀತವಾಗಿ ಮತಕ್ಷೇತ್ರದ ಎಲ್ಲ ಗ್ರಾಮಗಳಿಂದ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು, ಯುವಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಟಿಯಲ್ಲಿ ಪುರಸಭೆ ಅಧ್ಯಕ್ಷ ರಾಜಮಹ್ಮದ ಬಾಗವಾನ, ಸದಸ್ಯರಾದ ಫಾರೂಖ ದೊಡಮನಿ, ಪರಶುರಾಮ ರೋಣದ, ಪಾಂಡು ಕಟ್ಟೀಮನಿ, ಮುಖಂಡರಾದ ಎಫ್.ಆರ್.ಪಾಟೀಲ(ಮಣ್ಣೇರಿ), ಶಶಿಕಾಂತ ಉದಗಟ್ಟಿ, ರೇವಣಸಿದ್ದಪ್ಪ ನೋಟಗಾರ, ಮಂಜುನಾಥ ಗುಬ್ಬಿ, ಹನಮಂತ ದೇವರಮನಿ, ಶಿವು ಮಣ್ಣೂರ, ಗುರುನಾಥ ಹುದ್ದಾರ, ಶಿವಪ್ಪ ಹನಮಸಾಗರ, ಯಮನಪ್ಪ ಶೆಟಗಾರ, ಮಹೇಶ ಪೂಜಾರ, ಚಂದ್ರಶೇಖರ ಚಿಂತಾಕಲ್, ಪ್ರವೀಣ ಜೋಗಿನ, ಬಸವರಾಜ ಬ್ಯಾಹಟ್ಟಿ, ಬಸವರಾಜ ಡೊಳ್ಳಿನ, ಸಿದ್ದನಗೌಡ ಗೌಡರ ಸೇರದಂತೆ ಇತರರು ಹಾಜರಿದ್ದರು.