ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ 30 :- ತಾಲೂಕಿನ ಕಾನಾಮಡುಗು ದಾಸೋಹ ಮಠದ ಆವರಣದಲ್ಲಿ ನಾಳೆ ಬೆಳಿಗ್ಗೆ 10ಗಂಟೆಗೆ ಮಾತಾ ಶ್ರೀ ಪಾರ್ವತಮ್ಮ ನಾಲ್ವಡಿ ಶರಣಾರ್ಯರ ತೃತೀಯ ಪುಣ್ಯ ಸ್ಮರಣೋತ್ಸವ ಜರುಗಲಿದ್ದು ಈ ಕಾರ್ಯಕ್ರಮ ನಿಮಿತ್ತ ನಾಡಿನ ಹೆಸರಾಂತ ಸಂಶೋಧಕ ಲೇಖಕರಾದ ಡಾ ಕೆ ರವೀಂದ್ರನಾಥ ಅವರ ವಿಜಯನಗರ ಸಾಹಿತ್ಯ ಸಂಸ್ಕೃತಿ ಕೃತಿ ಲೋಕಾರ್ಪಣೆ ಗೊಳ್ಳಲಿದೆ ಎಂದು ದಾಸೋಹ ಮಠದ ಐಮಡಿ ಶರಣಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೂಡ್ಲಿಗಿ ತಾಲೂಕಿನ ಕಾನಾಮಡುಗು ಶ್ರೀ ಶರಣಬಸವೇಶ್ವರ ದಾಸೋಹ ಮಠದ ‘ದಾಸೋಹಿ ಪ್ರಕಾಶನ’ದ ವತಿಯಿಂದ ನಾಡಿನ ಹೆಸರಾಂತ ಸಂಶೋಧಕರು, ಲೇಖಕರೂ ಆದಂತಹ ‘ಡಾ. ಕೆ. ರವೀಂದ್ರನಾಥ’ ಅವರ
‘ಐತಿಹಾಸಿಕ ವಿಜಯನಗರ’ದ ಕುರಿತಾದ ಅಪರೂಪದ ಲೇಖನಗಳ ಚಿತ್ರಣ, ಸಂಶೋಧನಾ ಸಂಕಲನ ಕೃತಿಯನ್ನು “ರಾಗಂ” ಎಂದೇ ಪ್ರಸಿದ್ಧರಾದ ಬೆಂಗಳೂರಿನ ಸಾಹಿತಿ ‘ಡಾ. ರಾಜಶೇಖರ ಮಠಪತಿ’ ಯವರು ಕೃತಿ ಬಿಡುಗಡೆಗೊಳಿಸಲಿದ್ದಾರೆ.
ನಾಡಿನ ಹರ-ಗುರು-ಚರ ಮೂರ್ತಿಗಳು ಸಾನಿಧ್ಯ ವಹಿಸುವರು.ಸಾಹಿತಿಗಳು, ಸಂಶೋಧಕರು, ಗಣ್ಯರು, ಹಿರಿಯ ಪತ್ರಕರ್ತರು ಪಾಲ್ಗೊಳ್ಳುವರು
ಸಾಹಿತ್ಯಾಭಿಮಾನಿಗಳು, ಪುಸ್ತಕ ಪ್ರಿಯರು, ಶ್ರೀ ಮಠದ ಸದ್ಭಕ್ತರಿಗೆ ‘ವಿಜಯನಗರ: ಸಾಹಿತ್ಯ- ಸಂಸ್ಕೃತಿ’ ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಐಮಡಿ ಶರಣಾರ್ಯರು ತಿಳಿಸಿದ್ದಾರೆ.