ನಾಳೆ ಕಸಾಪ ರಾಜ್ಯ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮತದಾನಕ್ಕೆ ಸಕಲ ಸಿದ್ದತೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ನಾಳೆ ನಡೆಯುವ ಕಸಾಪ ರಾಜ್ಯ ಅಧ್ಯಕ್ಷರ ಮತ್ತು ಜಿಲ್ಲಾ ಅಧ್ಯಕ್ಷರ ಚುನಾವಣೆಯ ಮತದಾನ ಬೆಳಿಗ್ಗೆ 8 ರಿಂದ ಆರಂಭವಾಗಲಿದೆ. ಇದಕ್ಕಾಗಿ
ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ  19 ಮತಗಟ್ಟೆಗಳನ್ನು ಸ್ಥಾಪಿಸಿದೆ. 15071 ಮತದಾರರಿದ್ದಾರೆಂದು ಚುನಾವಣಾಧಿಕಾರಿ‌ ರೆಹಾನ್ ಪಾಷಾ ತಿಳಿಸಿದ್ದಾರೆ.
ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದೆ. ನಾಡಿದ್ದು ಮತಗಳ ಎಣಿಕೆ ನಡೆಯಲಿದೆ.
ಮತದಾರರು ತಮ್ಮ ಭಾವ ಚಿತ್ರ ಇರುವ ಗುರುತಿನ ಚೀಟಿ,  ಕಸಾಪ ನೀಡಿರುವುದು ಇಲ್ಲವೇ,  ಡ್ರೈವಿಂಗ್ ಲೈಸೆನ್ಸ್, ಚುನಾವಣಾ ಆಯೋಗದ ಐಡಿ ಕಾರ್ಡು, ಪಾನ್ ಕಾರ್ಡ್, ಪಾ್ ಪೋರ್ಟ, ಆಧಾರ್ ಕಾರ್ಡ್ ಮೊದಲಾದವುಗಳಲ್ಲಿ ಯಾವುದಾದರೂ ಒಂದನ್ನು ತೋರಿಸುವುದು ಖಡ್ಡಾಯವಾಗಿದೆ.
ಜಿಲ್ಲಾ ಅಧ್ಯಕ್ಷರ ಅಭ್ಯರ್ಥಿಗಳ ಮತ ಪತ್ರ ಪಿಂಕ್ ಮತ್ತು ರಾಜ್ಯ ಅಧ್ಯಕ್ಷರ ಮತಪತ್ರ ಬಿಳಿಯದ್ದಾಗಿದೆ.‌
ಮತಗಟ್ಟೆ ಕೇಂದ್ರ ಸ್ಥಾಪಿಸಿರುವ ವಿಳಾಸ, ಮತಗಳ ವಿವರ ಹೀಗಿದೆ. ಬಳ್ಳಾರಿ (ಸರಕಾರಿ) ಪಿಯು (ಮುನಿಸಿಪಲ್) ಕಾಲೇಜ್ ನಲ್ಲಿ ನಾಲ್ಕು ಮತ ಗಟ್ಟೆಗಳನ್ನು ಸ್ಥಾಪಿಸಿದೆ ಇಲ್ಲಿ -3624 ಮತದಾರರಿದ್ದಾರೆ.
ಹಗರಿಬೊಮ್ಮನಹಳ್ಳಿ (ಹಳೇ ತಾಲೂಕು ಕಚೇರಿ) -879,  ತಂಬ್ರಹಳ್ಳಿ (ನಾಡ ಕಚೇರಿ) -487, ಹೊಸಪೇಟೆ ( ತಾಲೂಕು ಕಚೇರಿ)-828, ಹೂವಿನ ಹಡಗಲಿ (ತಾಲೂಕು ಕಚೇರಿ ಮೀಟಿಂಗ್ ಹಾಲ್)- 1162, ಕೊಟ್ಟೂರು (ನಾಡ ಕಚೇರಿ) -736, ಹರಪನಹಳ್ಳಿ (ಸರಕಾರಿ‌ ಪದವಿ ಪೂರ್ವ ಕಾಲೇಜು) 2 ಮತಗಟ್ಟೆಗಳು- 2354 ಮತದಾರರಿದ್ದಾರೆ.                
ಸಿರುಗುಪ್ಪ  (ತಾಲೂಕು ಕಚೇರಿ)-1100,  ತೆಕ್ಕಲಕೋಟೆ (ಪಟ್ಟಣ ಪಂಚಾಯಿತಿ ಕಚೇರಿ)        2 ಮತಗಟ್ಟೆಗಳು-1407, ಸಂಡೂರು (ತಾಲೂಕು ಬಾಲಕಿಯರ ಪ್ರೌಢಶಾಲೆ)-1037, ಕುರುಗೋಡು (ವಿಶೇಷ ತಹಶೀಲ್ದಾರರ ಕಚೇರಿ)- 387,  ಕಂಪ್ಲಿ ( ನಾಡ ಕಾರ್ಯಾಲಯ)-602, ಕೂಡ್ಲಿಗಿ (ಇಓ ಆಫೀಸ್, ತಾಲೂಕು ಪಂಚಾಯಿತಿ)-187, ಕಾನ ಹೊಸಹಳ್ಳಿ(ಎಸ್.ಕೆ.ಡಿ.ಡಿಎ ಪ್ರೌಢಶಾಲೆ, ಹೊಸಹಳ್ಳಿ)-281 ಜನ ಮತದಾರರಿದ್ದಾರೆ.