ನಾಳೆ ಕವನ ಸಂಕಲನ ಬಿಡುಗಡೆ

ಧಾರವಾಡ,ಸೆ22: ಇದೇ ದಿ. 23 ರಂದು ಡಾ. ವ್ಹಿ.ಸಿ. ಐರಸಂಗ ಗುರುಕುಲ ಟ್ರಸ್ಟ್ ಹಾಗೂ ರಂಗಾಯಣ ಧಾರವಾಡ ವತಿಯಿಂದ ಡಾ. ವ್ಹಿ.ಸಿ. ಐರಸಂಗ ಅವರ 92 ನೇ ಜನ್ಮದಿನೋತ್ಸವ ನಿಮಿತ್ತವಾಗಿ ಎನ್ನ ಬಾಳಿನ ವಸಂತ ಎಂಬ ಕವನ ಸಂಕಲನ ಬಿಡುಗಡೆ ಮಾಡಲಾಗುವುದು ಎಂದು ಡಾ. ರತ್ನಾ ಐರಸಂಗ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಶಾಂತಾ ಇಮ್ರಾಪುರ, ರಮೇಶ ಪರವಿನಾಯ್ಕರ್, ಶರಣಮ್ಮ ಗೋರೆಬಾಳ, ಡಾ. ಲಿಂಗರಾಜ ಅಂಗಡಿ, ಡಾ. ಶಶಿಧರ ನರೇಂದ್ರ, ಪ್ರಕಾಶ ಉಡಕೇರಿ, ಡಾ. ಇಸಾಬೆಲ್ಲಾ ಜೆವಿಯರ್, ಡಾ. ಜೀವನದತ್ತ ಹಡಗಲಿ, ಮಾಯಾ ಬಿಕ್ಕೇರೂರ್ ಭಾಗವಹಿಸಲಿದ್ದಾರೆ ಎಂದರು.
ಅದರಂತೆ ಕಾರ್ಯಕ್ರಮದಲ್ಲಿ ಸಂಗೀತ ಸಂಯೋಜಕ ರಾಘವ ಕಮ್ಮಾರ ಅವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಶಿಧರ ಉಜ್ಜಿನಿ, ಶಿವಾಂಗಿ ಯು ಎಸ್, ಪ್ರಕಾಶ ಅಂತಣ್ಣವರ ಸೇರಿದಂತೆ ಹಲವರು ಇದ್ದರು.