ನಾಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದಿಂದ ಪತ್ರಿಕಾದಿನಾಚರಣೆ

ದಾವಣಗೆರೆ. ಜು.೧೪; ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಸಂಘದಿಂದ ಜು.೧೫ ರ ನಾಳೆ ಮಧ್ಯಾಹ್ನ ೩ ಕ್ಕೆ ನಗರದ ಗುರುಭವನದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಪದಗ್ರಹಣ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಸಂಘದ ರಾಜ್ಯ ಉಪಾಧ್ಯಕ್ಷ ಬಿ.ವಾಸುದೇವ್ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ಶಿವಗಂಗಾ ಬಸವರಾಜ್, ಕೆ.ಎಸ್ ಬಸವಂತಪ್ಪ,ಡಿ.ಜಿ ಶಾಂತನಗೌಡ,ಬಿ.ದೇವೇಂದ್ರಪ್ಪ, ಬಿ.ಪಿ ಹರೀಶ್ ಹಾಗೂ ಮೇಯರ್ ವಿನಾಯಕ ಪೈಲ್ವಾನ್,ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮತ್ತಿತರರು ಆಗಮಿಸಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.ಕಾರ್ಯಕ್ರಮದಲ್ಲಿ ಕನ್ನಡಪ್ರಭ ಜಿಲ್ಲಾ ವರದಿಗಾರರಾದ ನಾಗರಾಜ್ ಬಡದಾಳ್,ಸುಭಾಷಿತ ಪತ್ರಿಕೆಯ ಸಂಪಾದಕ ಕೆ.ಜೈಮುನಿ ಹಾಗೂ ಹರಿಹರ ನಗರವಾಣಿ ಸಂಪಾದಕ ಸುರೇಶ್ ಕುಣೆಬೆಳೆಕೆರೆ ಅವರುಗಳನ್ನು ಸನ್ಮಾನಿಸಲಾಗುವುದು ಎಂದರು.ಪತ್ರಕರ್ತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಕೋರೋನಾ ಸಂದರ್ಭದಲ್ಲಿ ಪತ್ರಕರ್ತರು ಸಾಕಷ್ಟು ನೋವು ಅನುಭವಿಸಿದ್ದರು.ಪತ್ರಕರ್ತರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಆಗಸ್ಟ್ ಕೊನೆವಾರ ಅಥವಾಸೆಪ್ಟೆಂಬರ್ ನಲ್ಲಿ ಪತ್ರಕರ್ತರಿಗೆ ರಕ್ಷಣೆ,ಆರ್ಥಿಕ ನೆರವು ಸೇರಿದಂತೆ ವಿವಿಧ ವಿಚಾರಗಳ ಕುರಿತು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಬಿ.ವಾಸುದೇವ್,ರೇವಣ್ಣ ಬಳ್ಳಾರಿ,ಅಬ್ದುಲ್ ಮಜಿದ್,ಜಿ.ಹೆಚ್ ನಾಗರಾಜ್,ಬಿ.ಅಲ್ಲಾಭಕ್ಷಿ,ಹೆಚ್.ಚನ್ನಬಸಪ್ಪ, ಮಾಲ,ಸಲ್ಮಾಬಾನು,ಸಚಿನ್,ಕರಿಯಪ್ಪ,ಎ.ಎಂ ಕೊಟ್ರಯ್ಯ ಉಪಸ್ಥಿತರಿದ್ದರು.