
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.14: ನಗರದ 35ನೇ ವಾರ್ಡಿನ ಕರಿಮಾರೆಮ್ಮ ಕಾಲೋನಿಯ ಬೆಟ್ಟದಲ್ಲಿನ ಕರಿಮಾರೆಮ್ಮ ದೇವಿಯ ಜಾತ್ರೆ ಮಹೋತ್ಸವವು ನಾಳೆ ನಡೆಯಲಿದೆ ಎಂದು 35ನೇ ವಾರ್ಡಿನ ಪಾಲಿಕೆ ಸದಸ್ಯ ಶ್ರೀನಿವಾಸುಲು (ಮಿಂಚು) ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಸಾಂಗವಾಗಿ ನಡೆದುಕೊಂಡು ಬರುತ್ತಿದ್ದ ಜಾತ್ರಾ ಮಹೋತ್ಸವ, ಕೊರೋನಾ ಸಾಂಕ್ರಾಮಿಕ ಹಾಗೂ ಇನ್ನಿತರ ಕಾರಣಗಳಿಂದ ಸ್ಥಗಿತವಾಗಿತ್ತು. ಪ್ರಸಕ್ತ ವರ್ಷದಿಂದ ಮತ್ತೆ ಜಾತ್ರಾ ಮಹೋತ್ಸವವನ್ನು ಈ ಮೊದಲಿನಂತೆ ಈ ವರ್ಷ ನಡೆಸಲಿದೆ.
ಗಂಗೆಪೂಜೆ, ಕುಂಭ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆಯಲ್ಲಿ ಭಕ್ತರು ಭಾಗಿಯಾಗುವಂತೆ ಅವರು ಕೋರಿದ್ದಾರೆ.
One attachment • Scanned by Gmail