ನಾಳೆ ಕರವೇಯಿಂದ ಭುವನೇಶ್ವರಿ ದೇವಿ ಮೆರವಣೆಗೆ

ಸಿಂಧನೂರು,ನ.೨೦- ೬೭ ನೇಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ತಾಲ್ಲೂಕು ಘಟಕದಿಂದ ನವಂಬರ ೨೧ ರಂದು ನಗರದಲ್ಲಿ ತಾಯಿ ಭುವನೇಶ್ವರಿ ದೇವಿಯ ಭವ್ಯ ಮೆರವಣಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷರಾದ ವೀರೇಶ ಬಾವಿಮನಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಮಧ್ಯಾಹ್ನ ನಗರಸಭೆಯ ಆವರಣದಿಂದ ತಾಯಿ ಭುವನೇಶ್ವರಿ ದೇವಿ ಭವ್ಯ ಮೆರವಣಿಗೆಯನ್ನು ನಗರದಲ್ಲಿ ನಡೆಸಿ ಸಂಜೆ ಬಸ್ ನಿಲ್ದಾಣ ಬಳಿ ಇರುವ ಬಯಲು ಜಾಗದಲ್ಲಿ ನಾಡಿನ ಪ್ರಸಿದ್ಧ ಹಾಸ್ಯ ಕಲಾವಿದರು ಹಾಗೂ ಜೂನೀಯರ ಚಿತ್ರ ನಟರಿಂದ ಹಾಸ್ಯ ರಸ ಮಂಜರಿ ಸಾಂಸ್ಕೃತಿಕ ಮನೋರಂಜನೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಶಾಸಕ ವೆಂಕಟರಾವ ನಾಡಗೌಡ ಕಾರ್ಯಕ್ರಮವನ್ನು ಉದ್ಘಾಟಿಸುವರು ಕಾಡಾಧ್ಯಕ್ಷರಾದ ಕೊಲ್ಲಾ ಶೇಷ ಗಿರಿರಾವ್ ಕೃಷಿ ಉತ್ಪನ್ನ ಗಳ ಸಂಸ್ಕರಣ ಮತ್ತು ರಫ್ತು ನಿಗಮ ನಿಯಮಿತ ಅಧ್ಯಕ್ಷರಾದ ಕೆ.ವೀರುಪಾಕ್ಷಪ್ಪ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕೆಪಿಸಿಸಿ ಕಾರ್ಯ ದರ್ಶಿಯಾದ ಬಸನಗೌಡ ಬಾದರ್ಲಿ, ಮಾಜಿ ಕಾರ್ಯ ದರ್ಶಿಯಾದ ಕೆ.ಕರಿಯಪ್ಪ, ಕರವೇ ರಾಜ್ಯ ಅಧ್ಯಕ್ಷರಾದ ಪ್ರವೀಣ ಶೆಟ್ಟಿ, ಉತ್ತರ ಕರ್ನಾಟಕದ ಅಧ್ಯಕ್ಷರಾದ ಶರಣು, ಬಿ.ಗದ್ದುಗೆ ಜಿಲ್ಲಾಧ್ಯಕ್ಷ ರಾದ ವಿರೇಶ ಹೀರಾ ಸೇರಿದಂತೆ ಇನ್ನಿತರು ಪಾಲ್ಗೊಳ್ಳಲಿದ್ದಾರೆ ಕಾರ್ಯಕ್ರಮದ ಸಾನ್ನಿಧ್ಯ ವನ್ನು ವೆಂಕಟಗಿರಿ ಕ್ಯಾಂಪ್‌ನ ಡಾ.ಸಿದ್ದರಾಮ ಶರಣರು ವಹಿಸಲಿದ್ದಾರೆ.
ಕರವೇ ಮುಖಂಡರಾದ ದಿನೇಶ್ ಶೆಟ್ಟಿ ಫಾರುಖ್ ಪರಶುರಾಮ ಶಿವು ಖಾಸಿಂ ನಿಂಗರಾಜ ಮಹೇಬಾಬು ಅಂಬಿರಾಜು ಆದಿಲ್ ಸೇರಿದಂತೆ ಇತರರು ಇದ್ದರು.