ನಾಳೆ ಒನಕೆ ಓಬವ್ವ ಜಯಂತಿ ಅದ್ದೂರಿ ಆಚರಣೆ – ಕೆ.ಈ ಕುಮಾರ

ರಾಯಚೂರು,ನ.೧೦ – ಜಿಲ್ಲಾಡಳಿತ ವತಿಯಿಂದ ನವೆಂಬರ್ ೧೧ ರಂದು ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ ಎಂದು ಛಲವಾದಿ ಸಮಾಜದ ವೀರವನಿತೆ ಒನಕೆ ಓಬವ್ವ ಸಮಿತಿ ಮುಖಂಡ ಕೆ.ಈ ಕುಮಾರ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಕಾರ್ಯಕ್ರಮದಲ್ಲಿ ಸಮಾಜ ಸೇವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುವುದು. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ.ಮಹಾಲಿಂಗಪ್ಪ ಬಿ. ಡಾ. ಕೆ ರಾಮಪ್ಪ, ಹಾಗೂ ಜಿಲ್ಲಾ ಕಾರ್ಯದ ಪತ್ರಕರ್ತ ಸಂಘದ ಅಧ್ಯಕ್ಷ ಆರ್ ಗುರುನಾಥ
, ಸಮಾಜ ಸೇವೆ ಸಲ್ಲಿಸಿದ ಕು.ಪಲ್ಲವಿ, ರವಿ ದಾದಸ್ ಹಾಗೂ ೧೦ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಜಿ. ಮೇಘನಾ ಇವರಿಗೆ ಸನ್ಮಾನಿಸಿ ಗೌರಿಸಲಾಗುವುದು ಎಂದರು.
ಭಾರತ ಚರಿತ್ರೆಯಲ್ಲಿ ಕರ್ನಾಟಕಕ್ಕೆ ವಿರೋಚಿತ ಇತಿಹಾಸವಿದೆ, ಇಂತಹ ಕರ್ನಾಟಕದಲ್ಲಿ ಚಿತ್ರದುರ್ಗ ಐತಿಹಾಸಿಕವಾಗಿ, ಸಂಸ್ಕೃತಿಕವಾಗಿ, ಸಾಹಿತ್ಯಕ,ರಾಜಕೀಯ,ಶೈಕ್ಷಣಿಕ,ಆರ್ಥಿಕ, ಅಮೂಲ್ಯ ಕಾಣಿಕೆಯನ್ನು ನೀಡಿದ ತಾಣವಾಗಿದೆ ಎಂದರು.
ಚಿತ್ರದುರ್ಗ ಹಸರೇ ಒಂದು ಚೈತನ್ಯದ ಜಲಪಾತ ಸಾಹಸಿಗಳ ಇತಿಹಾಸ. ಮಹಾಪರಾಕ್ರಮಿ ರಾಜ ವೀರ ಮದಕರಿ ನಾಯಕರು ಆಳಿದ ಪವಿತ್ರ ಭೂಮಿಯಿದು. ಏಳು ಸುತ್ತಿನ ಕೋಟೆಯನ್ನು ಹೈದರಾಲಿ ಕುತಂತ್ರದಿಂದ ಹೊಸ ಪಡಿಸಿಕೊಳ್ಳಲು ಪ್ರತ್ನಿಸುತ್ತಿದ್ದನ್ನು ವಿಫಲಗೊಳಿಸಿ, ಚಿತ್ರದುರ್ಗದ ಕೋಟೆ ಮತ್ತು ಜನತೆಯನ್ನು ಬಹು ಅಪಾಯದಿಂದ ಪಾರು ಮಾಡಿದ ಮಹಾನ್ ಶಕ್ತಿದಾತೆ ವೀರವನಿತೆ ಒನಕೆ ಓಬವ್ವ ಎಂದರು.
ಈ ಸಂದರ್ಭದಲ್ಲಿ ಅಂಜಿನಯ್ಯ ಕೊಂಬಿನ್,ಬಾಜಿ ಸೇರಿದಂತೆ ಇತರರು ಇದ್ದರು.