ನಾಳೆ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ


ದಾವಣಗೆರೆ. ನ.೧೭; ನಗರದ ದೃಶ್ಯ ವಿಶ್ವ ಆರ್ಟ್ ಗ್ಯಾಲರಿಯಲ್ಲಿ ನಾಳೆ ಬೆಳಗ್ಗೆ ೧೧ ಕ್ಕೆ ಜಲಜಾಕ್ಷಿಪಿ ಕುಲಕರ್ಣಿಯವರು ರಚಿಸಿದ ಕಲಾಕೃತಿಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ದೃಶ್ಯಕಲಾ ಮಹಾವಿದ್ಯಾಲಯದ ಬೋಧಕರಾದ ದತ್ತಾತ್ರೇಯ ಭಟ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ನಾಳೆ ಬೆಳಗ್ಗೆ 11 ಕ್ಕೆ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ.ಶರಣಪ್ಪ ಹಲಸೆ  ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ರವಿಚಂದ್ರ ಆಗಮಿಸಲಿದ್ದಾರೆ.ದೃಶ್ಯಕಲಾ ಮಹಾವಿದ್ಯಾಲಯದ ಸಂಯೋಜನಾಧಿಕಾರಿ ಡಾ.ಸತೀಶ್ ಕುಮಾರ್ ಪಿ.ವಲ್ಲೇಪುರೆ ಉಪಸ್ಥಿತರಿರುವರು.ನಾಳೆಯಿಂದ ನ.೨೦ ರವರೆಗೆ ಪ್ರತಿದಿನ ಬೆಳಗ್ಗೆ ೧೦.೩೦ ರಿಂದ ಸಂಜೆ ೫ ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಕಲಾವಿದೆ ಜಲಜಾಕ್ಷಿ ಕುಲಕರ್ಣಿ ಮಾತನಾಡಿ ಗುಲ್ಬರ್ಗಾದಲ್ಲಿ ಚಿತ್ರಕಲಾ ವಿದ್ಯಾಭ್ಯಾಸ ಮಾಡಿದ್ದೇನೆ.ನಂತರ ಎಂ.ಎಂ ಕೆ ಕಾಲೇಜಿನಲ್ಲಿ ವಿಜ್ಯುವಲ್ ಆರ್ಟ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಅನೇಕ ಕಲಾಕೃತಿಗಳನ್ನು ರಚಿಸಿದ್ದೇನೆ.ಜಾನಪದ ಕಲೆಗಳ ಆಕೃತಿ ಬಣ್ಣಗಳು ನನ್ನ ರಚನೆಯಲ್ಲಿ ಮೂಡಿಬಂದಿವೆ.ಹಲವಾರು ಪ್ರಶಸ್ತಿ ಪಡೆದಿದ್ದೇನೆ ಎಂದರು.