ನಾಳೆ ಎಲ್ಲ ಅಂಗನವಾಡಿ ಕೇಂದ್ರ ಬಂದ ಮಾಡಿ ಸಂಸದರಿಗೆ ಮನವಿಃ ಸುನಂದಾ

ವಿಜಯಪುರ, ಜು.10-ಗ್ರಾಚ್ಯುಟಿಗಾಗಿ, ಮುಷ್ಕರದ ಹಕ್ಕಿಗಾಗಿ, ಐ.ಸಿ.ಡಿ.ಎಸ್. ಯೋಜನೆಗೆ ಅಗತ್ಯ ಅನುದಾನ ಮತ್ತು ಬಲಿಷ್ಟ ಪಡಿಸಲಿಕ್ಕಾಗಿ ಮತ್ತು ಅಂಗನವಾಡಿ ನೌಕರರಿಗೆ ಶಾಸನ ಬದ್ಧ ಸವಲತ್ತುಗಳಿಗಾಗಿ ಒತ್ತಾಯಿಸಿ ರಾಷ್ಟ್ರ ಮತ್ತು ರಾಜ್ಯದ ಕರೆಯ ಮೇರೆಗೆ ಜುಲೈ.11 ರಂದು ವಿಜಯಪುರ ಸಂಸದರಿಗೆ ಎಲ್ಲ ಕಾರ್ಯಕರ್ತರಿಂದ ಮನವಿ ಸಲ್ಲಿಸಲಾಗುವುದು.

ಈ ಕಾರ್ಯಕ್ರಮಕ್ಕೆ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕಿನ ಅಂಗನವಾಡಿ ನೌಕರರು ಅಂಗನವಾಡಿ ಕೇಂದ್ರಗಳನ್ನು ಬಂದಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಅಂಗನವಾಡಿ ನೌಕರರು ಭಾಗವಹಿಸಿ ಯಶಸ್ವಿಗೊಳಿಸಬೇಕು.

ಅದರಂತೆ ಜುಲೈ 26 ರಿಂದ ಅನಿರ್ಧಿಷ್ಟಾವದಿ ಪಾರ್ಲಿಮೆಂಟ್ ಎದುರು ಜಿಲ್ಲೆಯ ನಿಗಧಿತ ಕಾರ್ಯಕರ್ತರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ವಿಜಯಪುರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಸುನಂದಾ ನಾಯಕ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.