ನಾಳೆ ಉದ್ಯೋಗ ಮೇಳ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.24: ನಗರದಲ್ಲಿರುವ ವೀ ವಿ ಸಂಘದ ಅಂಗ ಸಂಸ್ಥೆಯಾದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ತಾಂತ್ರಿಕ ವಿದ್ಯಾಲಯದಲ್ಲಿ ನಾಳೆ ಎಸ್.ಎಸ್.ಎಲ್.ಸಿ ಐ.ಟಿ.ಐ,ಪಿ.ಯು.ಸಿ, ಡಿಪ್ಲೋಮಾ ಮತ್ತು ಪದವಿ ಪೂರೈಸಿರುವ ಅಭ್ಯರ್ಥಿಗಳಿಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಹೆಚ್.ಎಂ.ಕಿರಣ್ ಕುಮಾರ್ ತಿಳಿಸಿದರು.
ನಗರದ ಮರ್ಚಡ್ ರೆಸಿಡೆನ್ಸಿ ಹೋಟೆಲ್‍ನಲ್ಲಿನ ಸಭಾಂಗಣದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 35ಕ್ಕೊ ಹೆಚ್ಚು ಕಂಪನಿಗಳು ಆಗಮಿಸುತ್ತಿವೆ.
ಪ್ರಖ್ಯಾತ ಕಂಪನಿಗಳಾದ ಬಾಷ್, ಸ್ಯಾಮ್‍ಸಂಗ್, 3ಎಂಇಂಡಿಯಾ, ಲೈಟೆನಿಂಗ್ ಟೆಕ್ನಾಲಜಿಸ್,ಕೇವಲ್ ಮಿಡಲ್ ಬೈ,ಬಿ.ಪಿ.ಎಲ್,ಮಹಾವೀರ್ ಮೆಡಿಕೇರ್ ಮತ್ತು ಇನ್ನು ಹಲವು ಕಂಪನಿಗಳು ಉದ್ಯೋಗ ಮೇಳಕ್ಕೆ ಆಗಮಿಸುತ್ತಿದ್ದು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿವೆ.
ಕಳೆದ ವರ್ಷ ಒಟ್ಟು ಹಾಜರಾದ 258 ಉದ್ಯೋಗಾಕಾಂಕ್ಷಿಗಳಲ್ಲಿ 219 ಜನರನ್ನು ನೇಮಕಗೊಳಿಸಿ ನೇಮಕಾತಿ ಪತ್ರವನ್ನು ಈ ಸಂದರ್ಭದಲ್ಲಿ ವಿತರಿಸಲಾಗಿತ್ತು.ಈ ಬಾರಿ ಒಟ್ಟು ವಿವಿಧ ಕಂಪನಿಗಳ 3000 ಹುದ್ದೆಗಳು ಖಾಲಿ ಇದ್ದು ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಕಾಲೇಜ್  ಆಡಳಿತ ಮಂಡಳಿಯ ಸದಸ್ಯರಾದ ಹಳೆಕೋಟೆ
ವೀರನಗೌಡ,  ಹಲಕುಂದಿ ವಿಜಯಕುಮಾರ್, ಸಂಗನಕಲ್ ಚಂದ್ರಶೇಖರ್ ಮತ್ತು ಪ್ರಾಚಾರ್ಯರಾದ ಡಾ. ಟಿ.ಎಂ. ವೀರಗಂಗಾಧರಸ್ವಾಮಿ ಉದ್ಯೋಗಾಧಿಕಾರಿಯಾದ ಕುಲ್ಲಯ್ಯ ಸ್ವಾಮಿ ಉಪಸ್ಥಿತರಿದ್ದರು.