ನಾಳೆ ಉದ್ಘಾಟನಾ ಸಮಾರಂಭ

ಹುಬ್ಬಳ್ಳಿ, ನ 6: ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ 50 ನೇ ವರ್ಷದ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭವನ್ನು ನಾಳೆ ಬೆಳಿಗ್ಗೆ 10.30 ಕ್ಕೆ ಹುಬ್ಬಳ್ಳಿಯ ಜಯಚಾಮರಾಜ ನಗರದ ನೆಹರೂ ಮೈದಾನ ಬಳಿ ಇರುವ ಚೇಂಬರ ಆಫ್ ಕಾಮರ್ಸ್‍ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ನಂಜುಂಡ ಪ್ರಸಾದ್ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷರಾದ ಎಸ್.ನಂಜುಂಡ ಪ್ರಸಾದ್, ಗೌರವ ಕಾರ್ಯದರ್ಶಿ ಮುಕುಂದ ಪೆÇೀತ್ನೀಸ್, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರಾದ ಎಸ್.ಟಿ. ಅಕ್ಕಿ, ಕೆ.ಎಸ್.ಟಿ.ಪಿ.ಎ ಬೆಳಗಾವಿ ವಲಯ ಉಪಾಧ್ಯಕ್ಷ ಮಹಾಂತೇಶ ದಾಡಿಗುಂಡಿ, ಧಾರವಾಡ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಸೇರಿದಂತೆ ಸಂಘದ ಮಾಜಿ ಅಧ್ಯಕ್ಷರುಗಳು, ಮಾಜಿ ಕಾರ್ಯದರ್ಶಿಗಳು ಉಪಸ್ಥಿತರಿರಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರವೀಂದ್ರ ಶೆಟ್ಟಿ, ಮಹಾಂತೇಶ ದಾಡಿಗುಂಡಿ, ಸುನೀಲ್ ನಾವಲಗಿ, ಸಂಘದ ಉಪಾಧ್ಯಕ್ಷ ಅರವಿಂದ ಲಿಂಬಿಕಾಯಿ, ಮುಕುಂದ ಪೆÇೀತ್ನಿಸ್, ಕೆ.ಸಿ.ಆನಂದ, ಮಂಜುನಾಥ ಧಾಡಿಗುಂಡಿ, ದಿವಾಕರ ಶೆಟ್ಟಿ, ರಾಧೇಶ ಜಂಬಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.