ನಾಳೆ ಉಜ್ಜಿನಿಕಾರ್ತಿಕೋತ್ಸವ

ಕೊಟ್ಟೂರು ಡಿ 28: ಪಂಚಪೀಠಗಳಲ್ಲಿ ಒಂದಾದ ತಾಲೂಕಿನ ಉಜ್ಜಿನಿ ಪೀಠದಲ್ಲಿ ನಾಳೆ ಲಿಂ.ಜಗದ್ಗುರುಮರುಳಸಿದ್ದರಾಜದೇಶಿಕೇಂದ್ರಶಿವಾಚಾರ್ಯ ಮಹಾಸ್ವಾಮಿಗಳ 9ನೇ ವರ್ಷದ ಪುಣ್ಯಸಂಸ್ಮರಣೋತ್ಸವ, ಸಾಮೂಹಿಕ ವಿವಾಹ ಹಾಗೂ ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿಯ ಲಕ್ಷದೀಪೋತ್ಸವ ಪೀಠದ ಸಿದ್ದಲಿಂಗ ಜಗದ್ಗುರುಗಳ ನೇತೃತ್ವದಲ್ಲಿ ಜರುಗಲಿದೆ. ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಧೀಶ್ವರರು, ಗಣ್ಯವ್ಯಕ್ತಿಗಳು ಭಾಗವಹಿಸುವವರು.