ನಾಳೆ ಉಚಿತ ಬಂಜೆತನ ಪರೀಕ್ಷಾ ಶಿಬಿರ

ರಾಯಚೂರು,ಏ.೦೮- ನಗರದ ರಾಮಲಿಂಗೇಶ್ವರ ದೇವಸ್ಥಾನ ಹತ್ತಿರವಿರುವ ಹೊಸಮನಿ ಆಸ್ಪತ್ರೆಯಲ್ಲಿ ಡಾ. ರಶ್ಮಿ ಹೊಸಮನಿ ಅವರ ನೇತೃತ್ವದಲ್ಲಿ ಜಿಲ್ಲೆಯ ಹಲವರಿಗೆ ಅನುಕೂಲವಾಗಲೆಂದು ಉಚಿತ ಬಂಜೆತನ ಪರೀಕ್ಷಾ, ಸಮಾಲೋಚನೆಯ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತ ವರ್ಗದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ನಮ್ಮ ಹೊಸಮನಿ ಆಸ್ಪತ್ರೆಯವರಿಂದ ವಿಶೇಷವಾಗಿ ನಾಳೆ ದಿನಾಂಕ :೦೯/೦೪/೨೦೨೩ರ ಭಾನುವಾರ ದಂದು ಮಕ್ಕಳಿಲ್ಲದ ದಂಪತಿಗಳಿಗೆ ಸ್ತ್ರೀ ರೋಗ ತಜ್ಞರಿಂದ ಉಚಿತ ತಪಾಸಣೆ ಹಾಗೂ ಸಮಾಲೋಚನೆಯಲ್ಲಿ ಮಹಿಳೆಯರಿಗೆ ಉಚಿತ ಸ್ಕ್ಯಾನಿಂಗ್, ಪುರುಷರಿಗೆ ಉಚಿತ ವೀರ್ಯಾಣು ಪರೀಕ್ಷೆಯನ್ನು ಮಾಡಲಾಗುತ್ತದೆ,ಜಿಲ್ಲೆಯ ಜನತೆ ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗುರುಪ್ರಸಾದ್ ಹೊಸಮನಿ ತಿಳಿಸಿದರು.
ಡಾ. ರಶ್ಮಿ ಹೊಸಮನಿ ಅವರ ಮುಂದಾಳತ್ವದಲ್ಲಿ ನಡಿಯುವ ಉಚಿತ ಬಂಜೆತನ ಪರೀಕ್ಷಾ ಶಿಬಿರವನ್ನು ಆಯೋಜಿಸಲಾಗಿದ್ದು ಆಸಕ್ತಿಯುಳ್ಳ ದಂಪತಿಗಳು ೮೯೫೧೧೫೫೨೭ ಕರೇ ಮಾಡಿ ನೋಂದಾಯಿಸಿಕೊಳ್ಳಿ, ಶಿಬಿರದಲ್ಲಿ ದಂಪತಿಗಳ ಸಮಾಲೋಚನೆ ಹಾಗೂ ಉಚಿತ ತಪಾಸಣೆ ಮಾಡಿಸಿಕೊಳ್ಳಿ ಇದನ್ನ ಸದುಉಪಯೋಗವನ್ನು ಪಡೆದುಕೊಳ್ಳಿ ಎಂದು ಪ್ರಕಟಣೆಯಲ್ಲಿ ತಿಳಿಸಿದರು.