ನಾಳೆ ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆ ಮತದಾನ ಸಾಮಾಗ್ರಿಗಳೊಂದಿಗೆ ಸಿಬ್ಬಂದಿ ಸಜ್ಜು

module: NormalModule; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 97.0;


* ಜಿಲ್ಲೆಯಲ್ಲಿ 24,183 ಮತದಾರರು
* 24 ಮತಗಟ್ಟೆಗಳು
* ಬೆಳಿಗ್ಗೆ 8 ರಿಂದ ಸಂಜೆ 4 ರ ವರೆಗೆ ಮತದಾನ
* ಹೋಬಳಿ ಮಟ್ಟದಲ್ಲಿ ಮೊದಲ ಬಾರಿಗೆ ಮತದಾನ
* ಜೂನ್ 6 ಮತಗಳ ಎಣಿಕೆ ಕಲ್ಬುರ್ಗಿಯಲ್ಲಿ
* 19 ಜನ ಕಣದಲ್ಲಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜೂ,2-  ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರ ಚುನಾವಣೆಗೆ  ನಾಳೆ ಬೆಳಿಗ್ಗೆ 8 ರಿಂದ ಸಂಜೆ 4 ರ ವರೆಗೆ ಮತದಾನ ನಡೆಯಲಿದೆ. ಇದಕ್ಕಾಗಿ ಜಿಲ್ಲೆಯಲ್ಲಿ 24 ಮತಗಟ್ಟೆಗಳನ್ನು ರಚಿಸಿದೆ. ಇಂದು ಮತದಾನಕ್ಕೆ ಬೇಕಾದ ಸಾಮಾಗ್ರಿಗಳೊಂದಿಗೆ ಸಿಬ್ಬಂದಿ ಮತಗಟ್ಟೆಗಳತ್ತ ತೆರಳಿದ್ದಾರೆ.
ಮತದಾನಕ್ಕೆ  ಬಳ್ಳಾರಿ ಜಿಲ್ಲೆಯಲ್ಲಿ 14,981 ಪುರುಷರು, 9,198 ಮಹಿಳೆಯರು ಮತ್ತು 4 ಜನ ಇತರೆ ಸೇರಿದಂತೆ ಒಟ್ಟು 24,183 ಮತದಾರರಿದ್ದಾರೆ.
ಎಂದು ಸಹಾಯಕ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ….ಬೈಟ್
ಜಿಲ್ಲೆಯ ಆಯಾ ತಾಲುಕು ಕೇಂದ್ರಗಳಲ್ಲಿ ಇಂದು ಬೆಳಿಗ್ಗೆ ಮತದಾನಕ್ಕೆ ಅವಶ್ಯವಾದ ಮತಪತ್ರ, ಶಾಹಿ, ಮತದಾನಕ್ಕಾಗಿ ಪೆನ್ನು, ಮತಪೆಟ್ಟಿಗೆ ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ತೆಗೆದುಕೊಂಡು ಮತಗಟ್ಟೆಗಳಿಗೆ ಬಂದು ತಲುಪಿದ್ದಾರೆ.
ಬಳ್ಳಾರಿ ನಗರದ ಏಳು ಬೂತ್ಗಳಿಗೆ ನಗರ ಪಾಲಿಕೆಯಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು.
ಮತದಾನ ಪ್ರಕ್ರಿಯೆಗೆ 140 ಜನ ಸಿಬ್ಬಂದಿಯನ್ನು ನೇಮಕ‌ಮಾಡಿದೆ. ನಾಳೆ ಬೆಳಿಗ್ಗೆ 8 ರಿಂದ ಮತದಾನ ಆರಂಭಗೊಂಡು ಸಂಜೆ 4 ವರೆಗೆ ನಡೆಯಲಿದೆ.
ಮೊದಲ ಬಾರಿಗೆ ಮತದಾರರ ಅನುಕೂಲಕ್ಕಾಗಿ ಹೋಬಳಿ ಮಟ್ಟದಲ್ಲೂ ಮತದಾನ ಕೇಂದ್ರ ತೆರೆದಿದೆ.
ಮತದಾನ‌ ಮುಗಿದ ಮೇಲೆ ಮತಪೆಟ್ಟಿಗೆಗಳನ್ನು ಜೂನ್ 6 ರಂದು ನಡೆಯುವ ಮತ ಎಣಿಕೆಗೆ ಕಲ್ಬುರ್ಗಿಗೆ ತೆಗೆದುಕೊಂಡು ಹೋಗಲಿದೆ. 
ಬಳ್ಳಾರಿ ನಗರದ ಸರಳದೇವಿ ಕಾಲೇಜು, ಕರ್ನಾಟಕ  ಪಬ್ಲಿಕ್ ಶಾಲೆ(ಗರ್ಲ್ಸ್ ಹೈಸ್ಕೂಲ್) ಮತ್ತು ಸೇಂಟ್ ಜೋಸೆಫ್ ಶಾಲೆಯಲ್ಲಿ ಮತಗಟ್ಟೆಗಳನ್ನು ತೆರೆದಿದೆ.