ನಾಳೆ ಆಳಂದ ಪಟ್ಟಣದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ : ಎಸ್‍ಪಿ

ಕಲಬುರಗಿ,ಮಾ.7-ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ನಾಳೆ ಶಿವರಾತ್ರಿಯಂದು ಪೂಜೆ ಸಲ್ಲಿಕೆ ಹಿನ್ನಲೆಯಲ್ಲಿ ಅಳಂದ ಪಟ್ಟಣದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ಎಸ್‍ಪಿ ಅಕ್ಷಯ್ ಹಾಕೆ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಲಯದ ಆದೇಶದನ್ವಯ ಎಲ್ಲರೂ ನಡೆದುಕೊಳ್ಳಬೇಕು ಜನರಲ್ಲಿ ಮನವಿ ಮಾಡಲಾಗಿದೆ. ಅಂದು ಮುಂಜಾಗೃತ ಕ್ರಮವಾಗಿ 3 ಹೆಚ್ಚುವರಿ ಎಸ್ಪಿ, 15 ಡಿವೈಎಸ್ಪಿ ಸೇರಿದಂತೆ 1500 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಈಗಾಗಲೇ 13ಕ್ಕೂ ಅಧಿಕ ಶಾಂತಿಸಭೆ ಸಹ ಮಾಡಲಾಗಿದೆ. ಹಲವರನ್ನ ಬಾಂಡ್ ಓವರ್ ಮಾಡಲಾಗಿದ್ದು, ಇನ್ನೂ ಕೆಲವರಿಗೆ ಗಡಿ ಪಾರು ಮಾಡಲಾಗಿದೆ. ಆಳಂದ ಪಟ್ಟಣದ ಜನ ಪರಸ್ಪರ ಪ್ರೀತಿ ವಿಶ್ವಾದದಿಂದ ಇದ್ದಾರೆ. ಹೀಗಾಗಿ ಹೊರಗಡೆ ವ್ಯಕ್ತಿಗಳಿಂದ ಪ್ರಚೋದನೆ ಆಗದಂತೆ ತಿಳಿಸಲಾಗಿದೆ. ಅಷ್ಟೇ ಅಲ್ಲ ಏನೆ ಸಮಸ್ಯೆ ಇದ್ದರೂ ನಮ್ಮ ಗಮನಕ್ಕೆ ತರಲು ತಿಳಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಬರುವ ಸುದ್ದಿಗಳಿಂದ ಪ್ರಚೋದನೆ ಆಗದಂತೆ ಸೂಚಿಸಲಾಗಿದೆ. ಇನ್ನು ಆಳಂದ ಮುಖಾಂತರ ಬೇರೆಡೆ ಹೋಗುವ ಪ್ರಯಾಣಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಎಸ್‍ಪಿ ತಿಳಿಸಿದರು.