ನಾಳೆ ಆದಿಪರಾಶಕ್ತಿ ಕಬ್ಬಾಳಮ್ಮ ಗಿಂಡಿ ಮಹೋತ್ಸವ

ಬೆಂಗಳೂರು, ಮೇ. ೨- ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕು, ಅಪ್ಪಗೆರೆ ಗ್ರಾಮದಲ್ಲಿ ನೆಲಸಿರುವ ‘ಶ್ರೀ ಆದಿಪರಾಶಕ್ತಿ ಮತ್ತು ಶ್ರೀ ಕಬ್ಬಾಳಮ್ಮನವರ ೧೯ನೇ ಗಿಂಡಿ ಮಹೋತ್ಸವವನ್ನು ಏರ್ಪಡಿಸಲಾಗಿದೆ.
ನಾಳೆ ಬೆಳಿಗ್ಗೆ ೭.೩೦ಕ್ಕೆ ದೇವಿಗೆ ಹೂವಿನ ಅಲಂಕಾರ, ಅಭಿಷೇಕ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ, ೮ಕ್ಕೆ ವೆಂಕmರಮಣ ಸ್ವಾಮಿ ಮಣೇವು ಕಾರ್ಯಕ್ರಮಕ್ಕೆ ಬೆಳಿಗ್ಗೆ ೧೦ ರಿಂದ ೧೨ ಗಂಟೆಯವರೆಗೆ ಶ್ರೀ ಆದಿಶಕ್ತಿ ಮತ್ತು ಶ್ರೀ ಕಬ್ಬಾಳಮ್ಮನವರಿಗೆ ಭಕ್ತಾದಿಗಳಿಂದ ಸೋಗಲು ಹಾಕುವುದು. ೧೨ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆಗೆ ಗಿಂಡಿ ಮೆರವಣಿಗೆ ಮತ್ತು ಪೂಜಾ ಕಾರ್ಯಗಳು ನಡೆಯಲಿವೆ.
ಸಂಜೆ ೬ ಗಂಟೆಗೆ ಅನ್ನದಾನವನ್ನು ಏರ್ಪಡಿಸಲಾಗಿದ್ದು, ಊರಿನ ಗ್ರಾಮಸ್ಥರು, ಅಕ್ಕ ಪಕ್ಕದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಪೂಜಾರಿ ಬೋರಯ್ಯ, ಪೂಜಾರಿ ರಾಣಿಯಮ್ಮ ಅವರುಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.