ನಾಳೆ ಆಕಾಶವಾಣಿಯಲ್ಲಿ ಬಸವ ಐಸಿರಿ’

ಧಾರವಾಡ,ಮೇ.1: ನಗರದ ಆಕಾಶವಾಣಿ ಕೇಂದ್ರದ ಮೂಲಕ ನಾಳೆ ಮುಂಜಾನೆ 10 ಗಂಟೆಗೆಬಸವ ಐಸಿರಿ’ ಕಾರ್ಯಕ್ರಮ ಪ್ರಸಾರವಾಗಲಿದೆ.
ಈ ಕಾರ್ಯಕ್ರಮದಲ್ಲಿ ಇಲ್ಲಿಯ ಡಯಟ್ ಜೀವನ ಶಿಕ್ಷಣ' ಮಾಸಪತ್ರಿಕೆಯ ಸಹ ಸಂಪಾದಕ ಡಾ.ಗುರುಮೂರ್ತಿ ಯರಗಂಬಳಿಮಠ ಅವರುಅಷ್ಟಾವರಣಗಳಲ್ಲಿ ಇಷ್ಟಲಿಂಗದ ಮಹತ್ವ’ ಎಂಬ ವಿಷಯವಾಗಿ ಹಾಗೂ ಇನ್ನೋರ್ವ ಸಹ ಸಂಪಾದಕ ರಾಜು ಭೂಶೆಟ್ಟಿ ಅವರು ವಚನಗಳಲ್ಲಿ ವಿಜ್ಞಾನ' ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಆಕಾಶವಾಣಿ ನಿಲಯ ನಿರ್ದೇಶಕ ಡಾ. ಬಸು ಬೇವಿನಗಿಡದ, ಹಿರಿಯ ಉದ್ಘೋಷಕಿ ಮಾಯಾ ರಾಮನ್ ಸೇರಿದಂತೆ ಇತರ ನಿರ್ಮಾಪಕ ತಂಡದವರು ಸಿದ್ಧಪಡಿಸಿರುವ ಈ ಕಾರ್ಯಕ್ರಮವು ಬಾಗಲಕೋಟ ಜಿಲ್ಲೆಯ ಕೂಡಲಸಂಗಮ ಕ್ಷೇತ್ರದಕೂಡಲಸಂಗಮ ಅಭಿವೃದ್ಧಿ ಮಂಡಳಿ’ಯ ಪ್ರಾಯೋಜಕತ್ವದಲ್ಲಿ ಮೂಡಿಬರಲಿದೆ.
`ಬಸವ ಐಸಿರಿ’ ಸರಣಿ ಕಾರ್ಯಕ್ರಮವು ಪ್ರತೀ ಭಾನುವಾರ ಮುಂಜಾನೆ 10 ಗಂಟೆಗೆ ಧಾರವಾಡ ಆಕಾಶವಾಣಿಯ ಮುಖ್ಯ ವಾಹಿನಿ ಮತ್ತು ವಿವಿಧ ಭಾರತಿ ಸೇರಿದಂತೆ ರಾಜ್ಯದ ವಿವಿಧ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.