ನಾಳೆ ಅಯ್ಯಪ್ಪ ಸ್ವಾಮಿ ಪಲ್ಲಕ್ಕಿ ಮೆರವಣಿಗೆ :ಪೂರ್ವ ಸಿದ್ಧತೆ

ಎಲ್ಲ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ -ರವಿ ಬೋಸರಾಜ
ರಾಯಚೂರು,ಜ.೧೩. ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಮಂಡಲ ಪಡಿಪೂಜೆ , ಹೋಮ ಹವಗಳೊಂದಿಗೆ ವಿಶೇಷವಾಗಿ ಚಕ್ರ ಕರ್ಪೂರದ ದರ್ಶನದ ಮಹಾ ಪೂಜಾ ಮಹೋತ್ಸವದ ಪೂರ್ವ ಸಿದ್ಧತೆ ಇಂದು ವಾಲ್ಕಾಟ್ ಮೈದಾನದಲ್ಲಿ ನಡೆಸಲಾಗುತ್ತಿದೆ.
ನಾಳೆ ಎನ್. ಎಸ್.ಭೋಸರಾಜು ಫೌಂಡೇಶನ್ ವತಿಯಿಂದ ನಗರದ ಬಸವೇಶ್ವರ ವೃತ್ತದ ವಾಲ್ಕಾಟ್ ಮೈದಾನದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಮಂಡಲ ಪಡಿಪೂಜೆ , ಹೋಮ ಹವವಗಳೊಂದಿಗೆ ವಿಶೇಷವಾಗಿ ಚಕ್ರ ಕರ್ಪೂರದ ದರ್ಶನದ ಮಹಾ ಪೂಜಾ ಮಹೋತ್ಸವವ ಪೂರ್ವ ಸಿದ್ಧತೆ ಇಂದು ನಡೆಯುತಿದೆ
ಈ ಕುರಿತು ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಮಾತನಾಡುತ್ತ ಕೊರೊನ ಮಹಾಮಾರಿಯಿಂದ ಜನರು ತತ್ತರಿಸಿದ್ದು,ಶಬರಿ ಮಲೇ ದೇವಸ್ಥಾನಕ್ಕೆ ಒಗಲು ಆಗುತಿಲ್ಲ,ಪ್ರತಿ ವರ್ಷ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುವ ಭಕ್ತದಿಗಳಿಗೆ ಅನನುಕೂಲ ಆಗಿರುವುದರಿಂದ ಜಿಲ್ಲೆಯ ಸಮಸ್ತ ನಾಗರಿಕರಿಗೆ ನಾಳೆ ಅಯ್ಯಪ್ಪ ಸ್ವಾಮಿಯ ಪೂಜಾ ಕಾರ್ಯಕ್ರಮವನ್ನು ಅಮ್ಮಿಕೊಳ್ಳಲಾಗಿದೆ.
ನಾಳೆ ವಿಶೇಷವಾಗಿ ಬೆಳಿಗ್ಗೆ ೯ ಗಂಟೆಗೆ ಶ್ರೀ ಅಯ್ಯಪ್ಪ ದೇವಾಸ್ಥಾನದಿಂದ ವಾಲ್ಕಟ್ ಮೈದಾನದವರೆಗೆ ಪಲ್ಲಕ್ಕಿ
ಮೆರವಣಿಗೆ, ವಿವಿಧ ಹೋಮ ಹವನ,ಅನ್ನಪ್ರಸಾದ, ಕರ್ಪೂರ ದರ್ಶನ ಸಂಜೆ ೬ ಗಂಟೆಗೆ ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆಯಲಿದೆ ಹಾಗೂ ಪೂಜೆಗೆ ಆಗಮಿಸುವ ಎಲ್ಲ ಭಕ್ತದಿಗಳಿಗೆ ಮತ್ತು ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.