ನಾಳೆ ಅಮೃತ ಆರೋಗ್ಯ ಸೇವೆ

ಧಾರವಾಡ,ನ15: ಶಾಸಕರಾದ ಅಮೃತ ದೇಸಾಯಿಯವರ 45ನೇ ಜನ್ಮ ದಿನದ ಅಂಗವಾಗಿ ಇದೇ ದಿನಾಂಕ 16 ರಂದು ಅಮೃತ ಆರೋಗ್ಯ ಸೇವೆ ಎಂಬ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಅಮೃತ ದೇಸಾಯಿ ಅಭಿಮಾನಿ ಬಳಗದ ಅಧ್ಯಕ್ಷ ರುದ್ರಪ್ಪ ಅರಿವಾಳದ ತಿಳಿಸಿದರು.
ಧಾರವಾಡ ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಅಮೃತ ದೇಸಾಯಿಯವರು ಜಿಪಂ ಸದಸ್ಯರಾಗಿದ್ದಾಗಲೇ ಈ ಸಂಘ ಸ್ಥಾಪನೆ ಮಾಡಿ ಅನೇಕ ಜನಪರ ಕೆಲಸ ಮಾಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ಶಾಸಕರು ಹಾಗೂ ಜನಸೇವಕರಾದ ಅಮೃತ ದೇಸಾಯಿಯವರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಈ ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗಿದೆ.
ಆರೋಗ್ಯ ಶಿಬಿರದಲ್ಲಿ 60 ಕ್ಕೂ ಹೆಚ್ಚು ತಜ್ಞ ವೈದ್ಯರು ಭಾಗವಹಿಸಲಿದ್ದಾರೆ. ಕ್ಷೇತ್ರದ ಎಲ್ಲ ಬಡ ಜನರಿಗೆ ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಅನುಕೂಲ ಕಲ್ಪಿಸಲು ಈ ಶಿಬಿರ ನಡೆಸಲಾಗುತ್ತಿದೆ.
60ಕ್ಕೂ ಹೆಚ್ಚು ವೈದ್ಯರು ವಿವಿಧ ಕಾಯಿಲೆಗಳಿಗೆ ಉತ್ತಮ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕಿರಣಗೌಡ ಪಾಟೀಲ, ರಾಜು ಜೀವಣ್ಣವರ, ಸಂತೋಷ ಬೇಟಗೇರಿ, ಯಲ್ಲಪ್ಪ, ಡಾ. ಪ್ರಭಾಕರ ಮಾಂಡ್ರೆ ಸೇರಿದಂತೆ ಹಲವರು ಇದ್ದರು.