ನಾಳೆ ಅಂದ್ರಾಳ್ ನಲ್ಲಿಸೀತಾರಾಮ ರಥೋತ್ಸವ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.16: ನಗರದ ಎಂಟನೇ ವಾರ್ಡಿನ ಅಂದ್ರಾಳ್ ಗ್ರಾಮದ ರಾಮದೇವರ ದೇವಸ್ಥಾನದಲ್ಲಿ ನಾಳೆ ರಾಮನವಮಿ ಅಂಗವಾಗಿ  ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಆರ್.ವೆಂಕಟರೆಡ್ಡಿ, ಸದಸ್ಯರು ಮತ್ತು ಸ್ಥಳೀಯ ಕಾರ್ಪೊರೇಟರಾದ ಎಂ. ರಾಮಾಂಜಿನೇಯ ಅವರು ತಿಳಿಸಿದ್ದಾರೆ.
ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಪೂಜೆ, ಅಭಿಷೇಕ, ಪುಷ್ಪ ಅಲಂಕಾರ‌ಮಾಡಲಿದೆ. ಬಳಿಕ ಬೆಳಿಗ್ಗೆ 7 ವರೆಯಿಂದ  9.30 ರ ವರೆಗೆ ಸೀತಾರಾಮ ಕಲ್ಯಾಣೋತ್ಸವ ನಡೆಯಲಿದೆ. ನಂತರ ಮಧ್ಯಾಹ್ನ 12 ಗಂಟೆ ನಂತರ ದೇವಸ್ಥಾನಕ್ಕೆ ಬರುವ ಸಮಸ್ಥ ಭಕ್ತರಿಗೆ ಅನ್ನ ದಾಸೋಹ ನಡೆಯಲಿದೆ.
ಸಂಜೆ  3.15 ರ ನಂತರ ಸೀತಾರಾಮ ರಥೋತ್ಸವ ನಡೆಯಲಿದೆ. ಈಗಾಗಲೇ ರಥವನ್ನು ಸಿದ್ದೊರಿಸಲಾಗಿದ್ದು. ದೇವಸ್ಥಾನದ ಬಳಿ ನಾಳಿನ ಎಲ್ಲಾಕಾರ್ಯಗಳಿಗೆ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ. ಭಕ್ತಾಧಿಗಳು ಬಂದು ರಾಮನ ಕೃಪೆಗೆ ಪಾತ್ರರಾಗಲು ಕೋರಲಾಗಿದೆ.

One attachment • Scanned by Gmail