ನಾಳೆ‌ ಬೆಂಗಳೂರಿಗೆ ಬರಲಿವೆ 4 ಲಕ್ಷ ಲಸಿಕೆ:ಮಂಜುನಾಥ ಪ್ರಸಾದ್

ಬೆಂಗಳೂರು, ಮಾ.31- ರಾಜಧಾನಿ ಬೆಂಗಳೂರಿನಲ್ಲಿ ಲಸಿಕೆಗೆ ಯಾವುದೇ ಕೊರತೆಯಿಲ್ಲ. ಅವಶ್ಯಕ ಲಸಿಕೆ ಲಭ್ಯವಿದ್ದು, ಸದ್ಯ 1.50 ಲಕ್ಷ ಲಸಿಕೆ ಸಂಗ್ರಹವಿದೆ.ಜತೆಗೆ ನಾಳೆ 4 ಲಕ್ಷ ಲಸಿಕೆ ಬರಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.

ನಗರದಲ್ಲಿಂದು ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳ ನೋಡಲ್ ಅಧಿಕಾರಿಗಳ ಜೊತೆ ನಡೆಸಿದ ಅವರು, ಜನಗಣತಿ ಪ್ರಕಾರ 60 ವರ್ಷಕ್ಕೆ ಮೇಲ್ಪಟ್ಟವರು 10 ಲಕ್ಷ ಮಂದಿಯಿದ್ದು, 45 ವರ್ಷಕ್ಕೆ ಮೇಲ್ಪಟ್ಟವರು ಸುಮಾರು 25 ಲಕ್ಷ ಮಂದಿಯಿದ್ದಾರೆ.

ಇಷ್ಟು ಮಂದಿಗೆ ಲಸಿಕೆ ನೀಡಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು‌. ಹೆಚ್ಚು ಸೆಷನ್‌ಗಳನ್ನು ಮಾಡುವ ಆಸ್ಪತ್ರೆಗಳಿಗೆ ಅವಶ್ಯಕ ಲಿಸಿಕೆಗಳನ್ನು ನೀಡಲಾಗುವುದು. ನಗರದಲ್ಲಿ ಇದುವರೆಗೆ 7 ಲಕ್ಷ ಲಸಿಕೆ ನೀಡಲಾಗಿದ್ದು, ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು‌ ಎಂದರು.

ವ್ಯಾಕ್ಸಿನೇಷನ್ ನೀಡಲು ವ್ಯವಸ್ಥಿತ ಯೋಜನೆ: ಪಾಲಿಕೆ ವ್ಯಾಪ್ತಿಯಲ್ಲಿ ಬಿಬಿಎಂಪಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿ 525 ಕೇಂದ್ರ ಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದ್ದು, ದಿನಕ್ಕೆ 85,000ಕ್ಕೂ ಲಸಿಕೆ ನೀಡಬಹುದಾಗಿದೆ.

ನಾಳೆಯಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಪ್ರಕ್ರಿಯೆ ಜಾರಿಯಾಗಲಿದೆ. ಈ ಸಂಬಂಧ ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ ಹೆಚ್ಚಿನ ಸೆಷನ್‌ಗಳನ್ನು ಮಾಡಿಕೊಂಡು ಅವಶ್ಯಕ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡು ವ್ಯವಸ್ಥಿತವಾಗಿ ಲಸಿಕೆ ನೀಡಲು ಕ್ರಮವಹಿಸಿ ಎಂದು ಸೂಚನೆ ನೀಡಿದರು.