ನಾಳೆಯ ಪ್ರತಿಭಟನೆಗೆ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ

ಸಿರವಾರ.ನಂ೧೨- ರೈತರು ವ್ಯವಸಾಯದಲ್ಲಿ ಅಳಿವು ಉಳಿವಿನ ಪ್ರಶ್ನೆಯಾಗಿದ್ದೂ, ಭತ್ತ ಸೇರಿದಂತೆ ಇನ್ನಿತರ ಬೆಳೆ ಬೆಳೆಯು ಖರ್ಚು ಹೆಚ್ಚಾಗುತ್ತಿದ್ದೂ, ಬೆಲೆ ಮಾತ್ರ ಕಡಿಮೆಯಾಗುತ್ತಿದ್ದೂ, ಇದರಿಂದಾಗಿ ರೈತರ ಸಾಲದ ಸುಳಿಗೆ ಸಿಲುಕುವಂತಾಗುತ್ತದೆ. ರೈತರಿಗೆ ನೆರವಾಗಲು ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ, ಭತ್ತ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಒತ್ತಾಯಿಸಿ ನಾಳೆ(ಶುಕ್ರವಾರ ನಂ. ೧೩)ರಂದು ಹಸಿರು ಸೇನೆ, ರೈತ ಸಂಘವು ಹಮ್ಮಿಕೊಂಡಿರುವ ಪ್ರತಿಭಟನೆಗೆ ಸಿರವಾರ ತಾಲೂಕಿನ ಬೀಜ, ರಸಗೊಬ್ಬರ ಮಾರಾಟಗಾರರು, ವರ್ತಕರು, ಹೋಟೆಲ್ ಮಾಲಿಕರು, ಇನ್ನಿತರ ವರ್ತಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ರೈತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಪ್ರತಿಭಟನೆಯನ್ನು ಯಶಸ್ವಿಗೊಳಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಪಟ್ಟಣ ಪಂಚಾಯತಿ ಉಪಾದ್ಯಕ್ಷರ ಪದಗ್ರಹಣ
ಸಿರವಾರ.ನ.೧೨- ಪಟ್ಟಣದಲ್ಲಿ ಅನೇಕ ಸಮಸ್ಯೆಗಳು ಜೀವಂತವಾಗಿದ್ದೂ, ಉಳಿದ ಅವಧಿಯಲ್ಲಿ ಹಿರಿಯ-ಕಿರಿಯರ ಮಾರ್ಗದರ್ಶನದಲ್ಲಿ ಪಟ್ಟಣದ ಅಭಿವೃದ್ದಿಗೆ ಶ್ರಮಿಸುತ್ತೆನೆ ಎಂದು ಪ.ಪಂಚಾಯತಿ ಉಪಾದ್ಯಕ್ಷ ಚನ್ನಬಸವಗಡ್ಲ ಹೇಳಿದರು.
ಪಟ್ಟಣ ಪಂಚಾಯತಿಗೆ ೨ನೇ ಅವಧಿಗೆ ಉಪಾದ್ಯಕ್ಷರಾಗಿ ಇತ್ತಿಚೇಗೆ ಆಯ್ಕೆಯಾಗಿ ಇಂದು ಪದಗ್ರಹಣ ಮಾಡಿದ ನಂತರ ಮಾತನಾಡಿದ ಅವರು ಈ ವರ್ಷ ಅಧಿಕ ಮಳೆಯಾಗಿದ್ದೂ, ಅಂತರ್ಜಲ ಮಟ್ಟ ಹೆಚ್ಚಾಗಿದ್ದೆ, ಬೆಸಿಗ್ಗೆ ಸಮಯದಲ್ಲಿ ಕುಡಿಯುವ ನೀರಿಗೆ ತೊಂದರೆಯಾವುದಿಲ್ಲ ಎಂದುಕೊಂಡಿದ್ದೆವೆ. ಆದರೂ ಸಹ ಮೊದಲು ಕುಡಿಯುವ ನೀರು, ಚರಂಡಿ, ಮುಖ್ಯರಸ್ತೆ ಸ್ವಚ್ಛವಾಗಿಡುವಂತೆ ಅಧಿಕಾರಿಗಳಿಗೆ ತಿಳಿಸಲಾಗುವುದು. ಪಂಚಾಯತಿಯಲ್ಲಿ ಅಗತ್ಯ ಸಿಬ್ಬಂದಿಗಳು ಇದ್ದಿದೂ, ಸಕಾಲದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮುಖ್ಯಾದಿಕಾರಿ ಕೆ.ಮುನಿಸ್ವಾಮಿಯವರು ಅನುಭವಿ ಅಧಿಕಾರಿಯಾಗಿದ್ದೂ, ನಮ್ಮಂತ ಯುವಕರಿಗೆ ಮಾರ್ಗದರ್ಶನ ಅವಶ್ಯಕತೆ ಇದೇ. ಬಿಜೆಪಿಯಿಂದ ಗೆದ್ದಿದ್ದರೂ, ಬಿಜೆಪಿ, ಕಾಂಗ್ರೇಸ್, ಪಕ್ಷೇತರರ ಸಹಾಯದಿಂದ ಉಪಾದ್ಯಕ್ಷರಾಗಿದ್ದೆನೆ, ಚುನಾವಣೆಯಲ್ಲಿ ಮಾತ್ರ ಪಕ್ಷವನ್ನು ನೋಡೊಣ, ಪಂಚಾಯತಿ ಒಳಗೆ ಬಂದರೆ ನಾವು ಎಲ್ಲಾರೂ ಸದಸ್ಯರೆ, ನಾವು ಆ ಪಕ್ಷದವರು, ಈ ಪಕ್ಷದವರು ಎನ್ನುವ ಬೇದ ಭಾವ ಮಾಡದೆ ಉಳಿದ ಅವಧಿಯಲ್ಲಿ ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಮೂಲಕ ಸೇವೆ ಮಾಡೊಣ ಎಂದರು.
ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ, ಸದಸ್ಯರಾದ ಚನ್ನಪ್ಪ ನಾಗೋಲಿ, ನಾಗರಾಜಚಿನ್ನಾನ್, ಇರ್ಫಾನ್, ತಿಪ್ಪಣ, ದೇವೆಂದ್ರಪ್ಪ ಸಾಹುಕಾರ, ಖಾಸಿಂಮೋತಿ, ತಾ.ಪಂ ಸದಸ್ಯ ಮಲ್ಲಿಕಾರ್ಜುನ, ಮುಖಂಡರಾದ ಬ್ರೀಜೇಶ ಪಾಟೀಲ್, ಉಮಾಶಂಕರ, ಚುಕ್ಕಿ ಶಿವಕುಮಾರ,ದಾನನಗೌಡ, ಅರಕೇರಿ ಶಿವಶರಣ, ವೈ.ಭೂಪನಗೌಢ, ಎನ್.ಚಂದ್ರಶೇಖರ, ಜಿ.ವಿರೇಶ, ನಾಗಪ್ಪ ಪತ್ತಾರ, ಮಲ್ಲಪ್ಪ ಎನ್. ಹಸೇನ್ ಅಲಿ, ವೆಂಕಟೇಶ ದೊರೆ, ಹನುಮಗೌಡ ಮುರ್ಕಿಗುಡ್ಡ, ಅಬ್ರಾಹಂ ಹೊನ್ನಟಗಿ, ಜಯಪ್ಪ, ಹೆಚ್.ಕೆ ಅಮರೇಶ, ಪ.ಪಂ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಇದ್ದರು.

೧೨ ಸಿರವಾರ ೧ ಸಿರವಾರ ಪಟ್ಟಣ ಪಂಚಾಯತಿ ಉಪಾದ್ಯಕ್ಷರಾಗಿ ಚನ್ನಬಸವ ಗಡ್ಲ ಅಧಿಕಾರಿ ಸ್ವಿಕಾರ ಮಾಡಿದರು.

ಅಧಿಕಾರಿಗಳ ದಾಳಿ ೨೫ ಮಕ್ಕಳ ವಶಕ್ಕೆ-೪ ವಾಹನ ಪ್ರಕರಣ ದಾಖಲು
ಸಿರವಾರ.ನಂ೧೨- ಕೊರೋನಾ ವೈರಸ್‌ನಿಂದಾಗಿ ಶಾಲೆಗಳು ಪ್ರಾರಂಭವಾಗದ ಕಾರಣ ಕೂಲಿ ಕೆಲಸಕ್ಕೆ ಮಕ್ಕಳನ್ನು ಬಳಕೆ ಮಾಡಲಾಗುತ್ತಿದ್ದೂ, ಸಿರವಾರ ಮಾರ್ಗವಾಗಿ ನಿತ್ಯ ನೂರಾರು ಟಾಂ ಟಾಂ, ಟಾಟಾ ಎಸಿ, ಇನ್ನಿತರ ಗೂಡ್ಸ್ ವಾಹನದಲ್ಲಿ ಸಾಮಾರ್ಥ್ಯಕಿಂತಲೂ ಅಧಿಕ ಕೂಲಿಕಾರ್ಮಿಕರನ್ನು ಕರೆದುಕೊಂಡು ಬೇಜವಬ್ದಾರಿಯಿಂದ ವಾಹನ ಚಾಲನೆ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ಅಧಿಕಾರಿಗಳು ದಾಳಿ ಮಾಡಿ ೨೫ ಮಕ್ಕಳನ್ನು ರಕ್ಷಣೆ ಮಾಡಿ, ೪ ವಾಹನಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಸಿರವಾರ ಠಾಣೆಯ ಪಿಎಸ್‌ಐ ಸುಜಾತನಾಯಕ, ಬಾಲಕಾರ್ಮಿಕ ಜಿಲ್ಲಾ ಯೋಜನಾಧಿಕಾರಿ ಮಂಜುನಾಥ ರೇಡ್ಡಿ, ಸಾರಿಗೆ ನಿಯಂತ್ರಕ ನಾಗೇಂದ್ರ, ಕಂದಾಯ ನಿರೀಕ್ಷಕ ಶ್ರೀನಾಥ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಮುಖ್ಯಾದಿಕಾರಿ ಮುದುಕಪ್ಪ, ಸಿ.ಆರ್.ಪಿ ನಾಗರಾಜ, ದಿವಾಕರ, ತಾಲೂಕ ಯೋಜನಾಧಿಕಾರಿ ರವಿಕುಮಾರ, ಹನುಮೇಶ, ತಾಯ್‌ರಾಜ ಸೇರಿದಂತೆ ಇನ್ನಿತರರು ಇದ್ದರು.

೧೨ ಸಿರವಾರ ೨ ಸಿರವಾರದಲ್ಲಿ ಕಾರ್ಮಿಕ ಇಲಾಖೆಯ ದಾಳಿ ಮಾಡಿ ಮಕ್ಕಳನ್ನು ರಕ್ಷಣೆ ಮಾಡಿದರು.

ಡಿಸಿ ಆದೇಶ ಉಲ್ಲಂಘಿಸಿ ಭತ್ತ ಕಟಾವು ಯಂತ್ರಗಳಿಗೆ ಹೆಚ್ಚಿನ ದರ-ಕ್ರಮಕ್ಕೆ ಕರವೇ ಒತ್ತಾಯ

ಸಿರವಾರ, ನ.೧೨- ಭತ್ತ ಕಟಾವು ಯಂತ್ರಗಳಿಗೆ ಗಂಟೆಗೆ ೨೦೦೦ ರೂ. ದರ ನಿಗಧಿ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರೂ ಸಿರವಾರ ತಾಲೂಕು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಯಂತ್ರಗಳ ಮಾಲಿಕರು ಹಾಗೂ ಮಧ್ಯವರ್ತಿಗಳು ರೈತರಿಂದ ಹೆಚ್ಚಿನ ದರ ಪಡೆಯುತ್ತಿದ್ದು ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಿರವಾರ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

ಕೋವಿಡ್-೧೯ ಲಾಕ್‌ಡೌನ್ ನಿಂದ, ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ತತ್ತರಿಸಿರುವ ರೈತರಿಗೆ ಭತ್ತ ಕಟಾವು ಯಂತ್ರಗಳ ಮಾಲೀಕರು ಹಾಗೂ ಮಧ್ಯವರ್ತಿಗಳು ಹೆಚ್ಚಿನ ದರ ಪಡೆಯುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ, ಈಗಾಗಲೇ ಜಿಲ್ಲಾಧಿಕಾರಿಗಳು ೨೦೦೦ ರೂ. ಗೆ ದರ ನಿಗಧಿ ಮಾಡಿ ಆದೇಶ ಹೊರಡಿಸಿದ್ದಾರೆ, ಆದೇಶ ಉಲ್ಲಂಘಿಸಿ ಹೆಚ್ಚಿನ ದರ ಪಡೆಯುತ್ತಿದ್ದಾರೆ ಕೂಡಲೇ ಅಧಿಕಾರಿಗಳು ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಕೆ.ರಾಘವೇಂದ್ರ ಖಾಜನಗೌಡ, ಕಾರ್ಯಾಧ್ಯಕ್ಷ ವೆಂಕಟೇಶ ಶಂಕ್ರಿ, ಉಪಾಧ್ಯಕ್ಷ ಅಮರನಾಥ, ಆಲಂ ಪಾಷ, ವಿನಯಕುಮಾರ್, ಗುರುರಾಜ್ ಗೊಲ್ಲದಿನ್ನಿ, ಶರಣಬಸವ ನಾಯಕ ಮುಚ್ಚಳಗುಡ್ಡ ಸೇರಿದಂತೆ ಇನ್ನಿತರರು ಇದ್ದರು.

೧೨ ಸಿರವಾರ ೩ ಕರವೇ ಕಾರ್ಯಕರ್ತರು ತಹಸೀಲ್ದಾರರಿಗೆ ಮನವಿ ಸಲ್ಲಿಸುತ್ತಿರುವ ಚಿತ್ರವಿದೆ)