ನಾಳೆಯಿಂದ 3 ದಿನಗಳ
 ಕಲ್ಯಾಣ ಕರ್ನಾಟಕ ಕಬಡ್ಡಿ ವೈಭವ-ಸಿದ್ಧಾರ್ಥ


ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ2: ನಾಳೆಯಿಂದ ಮೂರು ದಿನಗಳ ಕಲ್ಯಾಣ ಕರ್ನಾಟಕ ಕಬಡ್ಡಿ ವೈಭವ ವಿಕೆಎಲ್-2023 ಆರಂಭವಾಗಲಿದೆ ಎಂದು ಯುವ ಮುಖಂಡ ಸಿದ್ಧಾರ್ಥ ಸಿಂಗ್ ಹೇಳಿದರು.
ಗುರುವಾರ ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾರ್ಚ್ 3, 4 ಮತ್ತು 5 ರಂದು ಮೂರುದಿನಗಳ ಕಾಲ ಬೆಳಿಗ್ಗೆ 8ಗಂಟೆ ಯಿಂದ ನಿರಂತರವಾಗಿ ಡಾ.ಪುನೀತ್ ರಾಜಕುಮಾರ ಜಿಲ್ಲಾ ಕ್ರೀಡಾಂಗಣ ದಲ್ಲಿ ನಡೆಯಲಿದೆ ಕಲ್ಯಾಣ ಕರ್ನಾಟಕದ ಪ್ರತಿ ತಾಲೂಕಿಗೆ ಒಂದರಂತೆ ತಂಡಗಳು ಭಾಗವಹಿಸಲಿದ್ದು ಭಾರತದ ಹೆಸರಾಂತ 3 ಕ್ರೀಡಾ ಪಟುಗಳು ಪ್ರತಿತಂಡದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ ಎಂದರು.
ಎಲ್ಲಾ ಕ್ರೀಡಾಪಟುಗಳಿಗೆ ಪ್ರಯಾಣ, ವಸತಿ, ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.‌ ಈ ಪಂದ್ಯಾವಳಿಯಲ್ಲಿ ಕಲ್ಯಾಣ ಕರ್ನಾಟಕದ 80 ತಂಡಗಳು ಪಾಲ್ಗೊಳ್ಳಲಿದ್ದು
ಉತ್ತಮ ಅಂಕಣ ವ್ಯವಸ್ಥೆ ಕ್ರೀಡಾಪಟುಗಳಿಗೆ ಆದರಾತಿತ್ಯ ನೀಡಲಿದ್ದೇವೆ.
ಯುವ ಜನಾಂಗಕ್ಕೆ ಉತ್ತಮ ಅಭ್ಯಾಸವನ್ನು ಮೃಗೂಡಿಸಿಕೊಳ್ಳುವಂತೆ ಮಾಡುವುದು ಕ್ರೀಡಾಕೂಟದ ಮುಖ್ಯ ಉದ್ದೇಶವಾಗಿದೆ ಎಂದರು.
ಪುರುಷರ 66 ಮತ್ತು ಹಾಗೂ ಮಹಿಳೆಯರ 14 ತಂಡಗಳು ಪಾಲ್ಗೊಳ್ಳಲಿವೆ, ಪ್ರತಿ ವಿಭಾಗದಲ್ಲಿ ಪ್ರಥಮ 1ಲಕ್ಷ 8ಸಾವಿರ,  ದ್ವೀತಿಯ 81 ಸಾವಿರ,  ತೃತೀಯ 54ಸಾವಿರ ಹಾಗೆಯೇ 4ನೇ ಬಹುಮಾನವನ್ನು ಪ್ರತಿವಿಭಾಗದಲ್ಲಿ ನೀಡಲಾಗುವುದು ಶುಕ್ರವಾರ ಸಂಜೆ ನಡೆಯುವ ಉದ್ಘಾಟನೆಯ ಪೂರ್ವದಲ್ಲಿ ವಡಕರಾಯ ದೇವಸ್ಥಾನದಿಂದ ಕ್ರೀಡಾಪಟುಗಳೊಂದಿಗೆ ಭವ್ಯ ಫಥ ಸಂಚಲನವನ್ನು ಆಯೋಜಿಸಲಾಗಿದೆ ಎಂದರು.
ಕ್ರೀಡಾಪಟು ಪಿ.ವೆಂಕಟೇಶ ಮಾತನಾಡಿ ಗ್ರಾಮೀಣ ಕ್ರೀಡೆಯನ್ನು ಪ್ರೋತ್ಸಾಹಿಸುವ ಹಾಗೂ ಪಾಲ್ಗೊಳ್ಳಲು ಮುಕ್ತ ಅವಕಾಶ ನೀಡಲಾಗುವುದು ಎಂದರು. ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ಪಾಲ್ಗೊಳ್ಳಲು ಸಹ ಅವಕಾಶ ಕಲ್ಪಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಹಿರಿಯ ಕ್ರೀಡಾಪಟು ದುರುಗೋಜಿರಾವ್, ತಾರಿಹಳ್ಳಿ ಜಂಬೂನಾಥ, ರಾಮಕೃಷ್ಣ, ಗುಜ್ಜಲ್ ಗಣೇಶ್, ಎಸ್.ರವಿ, ಮರಿಯಪ್ಪ ಪಾಲ್ಗೊಂಡಿದ್ದರು.