ನಾಳೆಯಿಂದ 2000 ನೋಟು ಬದಲಾಯಿಸಲು ಅವಕಾಶ

ನವದೆಹಲಿ,ಮೇ೨೨- ದೇಶದಲ್ಲಿ ೨ ಸಾವಿರ ಮುಖಬೆಲೆಯ ನೋಟುಗಳ ಚಲಾವಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹಿಂದಕ್ಕೆ ಪಡೆದಿದ್ದು, ನಾಳೆಯಿಂದ ಬ್ಯಾಂಕ್‌ಗಳ ವಿನಿಮಯ ಅಥವಾ ಠೇವಣಿಗೆ ಅವಕಾಶ ಮಾಡಿಕೊಟ್ಟಿದ್ದು, ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ದೇಶದ ಅತಿ ದೊಡ್ಡ ಶಾಖೆಗಳ ಜಾಲಹೊಂದಿರುವ ಭಾರತೀಯ ಸ್ಟೇಟ್ ಬ್ಯಾಂಕ್, ೨,೦೦೦ ರೂಪಾಯಿ ನೋಟು ವಿನಿಮಯ ಮಾಡಿಕೊಳ್ಳಲು ಯಾವುದೇ ಗುರುತಿನ ಚೀಟಿ ಪಡೆಯುವುದಾಗಲಿ ಫಾರ್ಮ್ ತುಂಬುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಆರ್‍ಬಿಂಐ ಒಮ್ಮಿಗೆ ೨೦ ಸಾವಿರ ರೂಪಾಯಿ ಮೌಲ್ಯದ ೨ ಸಾವಿರ ರೂಪಾಯಿ ಮೌಲ್ಯದ ನೋಟು ಚಲಾವಣೆಗೆ ಅವಕಾಶ ನೀಡಿದೆ. ಅದರಂತೆ ಗ್ರಾಹಕರು ಠೇವಣಿ ಅಥವಾ ವಿನಿಮಯ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.
ಹೆಚ್ಚಿನ ಮುಖಬೆಲೆಯ ನೋಟುಗಳನ್ನು ನಾಳೆಯಿಂದ ಬದಲಾಯಿಸಲು ಮತ್ತು ಠೇವಣಿ ಮಾಡಲು ನಾಲ್ಕು ತಿಂಗಳ ಸುದೀರ್ಘ ಅವಕಾಶವಿದೆ. ದೇಶದ ಅತಿದೊಡ್ಡ ಸಾಲದಾತ ಎಸ್‌ಬಿಐ ಮುಖ್ಯ ಜನರಲ್ ಮ್ಯಾನೇಜರ್‌ಗಳಿಗೆ ನೀಡಿದ ಸಂದೇಶದಲ್ಲಿ ನಿಲುಲು ಸ್ಪಷ್ಟಪಡಿಸಿದೆ.
ಎಸ್‌ಬಿಐನ ನಿರ್ಧಾರ ಇತರ ಬ್ಯಾಂಕುಗಳು ಕೂಡ ಇದೇ ಮಾದರಿ ಅನುಸರಿಸಲು ವೇದಿಕೆ ನಿರ್ಮಾಣ ಮಾಡಿಕೊಟ್ಟಿದೆ. ವಿಶೇಷವಾಗಿ ಸಾರ್ವಜನಿಕ ವಲಯದಲ್ಲಿ, ಖಾಸಗಿ ಬ್ಯಾಂಕ್‌ಗಳಲ್ಲಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ.
ಆಧಾರ್ ಅಥವಾ ಪ್ಯಾನ್ ಇಲ್ಲದವರನ್ನು ಸಾಮಾನ್ಯವಾಗಿ ದೀರ್ಘ ಪ್ರಕ್ರಿಯೆ ಅನುಸರಿಸುವಂತೆ ಮಾಡಲಾಗುತ್ತದೆ. ನೋಟು ಅಮಾನ್ಯೀಕರಣದ ಸಮಯದಲ್ಲಿ, ಸಾರ್ವಜನಿಕ ವಲಯದ ಆಟಗಾರರು ವಿಶೇಷವಾಗಿ ಬ್ಯಾಂಕ್ ಖಾತೆ ಇಲ್ಲದವರಿಗೆ ಬಂದಾಗ ಹೆಚ್ಚಿನ ತೊಂದರೆ ಅನುಭವಿಸಿದ್ದ ಹಿನ್ನೆಲೆಯಲ್ಲಿ ಎಸ್‌ಬಿಐ ಈ ಕ್ರಮ ಕೈಗೊಂಡಿದೆ.
ಬ್ಯಾಂಕ್ ಖಾತೆಗಳಿಗೆ ಠೇವಣಿ ಮಾಡಬೇಕಾದ ಮೊತ್ತದ ಮಿತಿಯಿಲ್ಲದೆ ಬ್ಯಾಂಕ್ ಶಾಖೆಗಳಲ್ಲಿ ೨,೦೦೦ ರೂ.ಗಳ ೧೦ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಆರ್‍ಬಿಐ ಅನುಮತಿ ನೀಡಿದೆ.