ನಾಳೆಯಿಂದ 14 ದಿನ ರಾಜ್ಯ ಲಾಕ್: ಬಸ್, ಮೆಟ್ರೊ ಬಂದ್ , ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು , ಏ 26- ಕೊರೋನಾ 2ನೇ ಅಲೆ ಸೋಂಕು ತಡೆಯಲು ರಾಜ್ಯ ಸರ್ಕಾರ ಮುಂದಾಗಿದ್ದು, ನಾಳೆ ರಾತ್ರಿಯಿಂದ ರಾಜ್ಯಾದ್ಯಂತ 14 ದಿನಗಳ ಕಾಲ ಲಾಕ್​ಡೌನ್​ ಹೇರಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಬಿಳಿಗ್ಗೆ 6 ಗಂಟೆಯಿಂದ 10 ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶವಿದೆ. ಈ ವೇಳೆ ವೈನ್ ಶಾಪ್ ನಲ್ಲಿ ಪಾರ್ಸಲ್ ಮಾತ್ರ ಅವಕಾಶವಿದೆ.
ಮೇ 12ರವರೆಗೆ ಹೊಸ ಲಾಕ್​ಡೌನ್​​ ಮಾರ್ಗಸೂಚಿ ಅನ್ವಯವಾಗಲಿದೆ. ನಾಳೆಯಿಂದ 14 ದಿನಗಳ ಕಾಲ ಕಠಿಣ ನಿಯಮ ಜಾರಿಗೊಳಿಸಿದೆ.
ಆಟೋ, ಟ್ಯಾಕ್ಸಿ ಸಂಚಾರ ಬಂದ್ ಆಗಲಿದೆ. ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ಬಂದ್​ ಆಗಲಿವೆ. ಚಿತ್ರಮಂದಿರಗಳು, ಶಾಪಿಂಗ್​ ಮಾಲ್​, ಯೋಗ ಕೇಂದ್ರ, ಜಿಮ್​ , ಸಲೂನ್​​ಗೆ ನಿರ್ಬಂಧ ವಿಧಿಸಲಾಗಿದೆ. ಇನ್ನು ಆನ್​ಲೈನ್​ ಆಹಾರ ತರಿಸಿಕೊಳ್ಖಲು ಅನುಮತಿ ನೀಡಲಾಗಿದೆ. ಹೋಟೆಲ್​-ರೆಸ್ಟೋರೆಂಟ್​ಗಳಲ್ಲಿ ಪಾರ್ಸಲ್​ ತೆಗೆದುಕೊಂಡು ಹೋಗಬಹುದು.
ಮೇ 12ರವರೆಗೆ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ , ಬಿಎಂಟಿಸಿ ಬಸ್​ಗಳು ರಸ್ತೆಗಿಳಿಯಲ್ಲ. ರಾಜ್ಯಾದ್ಯಂತ ಖಾಸಗಿ ಬಸ್​​​ಗಳ ಸಂಚಾರಕ್ಕೂ ನಿರ್ಬಂಧವೇರಲಾಗಿದ್ದು, ನಾಳೆ ರಾತ್ರಿ 9 ಗಂಟೆ ಬಳಿಕ ಯಾವುದೇ ಬಸ್​ಗಳು ರಸ್ತೆಗಿಳಿಯಲ್ಲ. ಇನ್ನು ವಿಮಾನ ಸೇವೆ ಏರ್​ಪೋರ್ಟ್​ ಟ್ಯಾಕ್ಸಿ ಸೇವೆ ಲಭ್ಯವಿರಲಿದೆ. ಅಂತರ್​ ರಾಜ್ಯ ಸಂಚಾರಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಅಂಕುಶ ಹಾಕಲಾಗಿದೆ.

ಅಗತ್ಯ ವಸ್ತುಗಳ ಸರಕು ಸಾಗಾಟಕ್ಕೆ ಮಾತ್ರ ಅವಕಾಶ ನೀಡಿದೆ. ಇದರ ಜೊತೆ ಸ್ಪಾ, ಎಲ್ಲಾ ರೀತಿಯ ಮನೋರಂಜನಾ ಕೇಂದ್ರಗಳು, ಪಾರ್ಕ್​​ಗಳು ಬಂದ್​​ ಆಗಲಿದೆ.

ರಾಜ್ಯಾದ್ಯಂತ ಎಲ್ಲಾ ಧಾರ್ಮಿಕ ಸ್ಥಳಗಳಿಗೂ ನಿರ್ಬಂಧವೇರಲಾಗಿದೆ. ದೇವಸ್ಥಾನಗಳು, ಚರ್ಚ್​, ಮಸೀದಿಗಳಿಗೆ ಭಕ್ತರ ಭೇಟಿ ನೀಡುವಂತಿಲ್ಲ. ಹೀಗಾಗಲೇ ಜಾತ್ರೆ, ಧಾರ್ಮಿಕ ಮಹೋತ್ಸವಗಳಿಗೆ ಸರ್ಕಾರ ನಿರ್ಬಂಧವೇರಿದ್ದು, ಅದು ಮುಂದುವರೆಯಲಿದೆ. ನಾಳೆಯಿಂದ ಎಲ್ಲಾ ರೀತಿ ರಾಜಕೀಯ ಚಟುವಟಿಗಳು ಬಂದ್​ ಆಗಲಿವೆ. ಯಾವುದೇ ಸಭೆ, ಸಮಾರಂಭಗಳು ನಡೆಸುವಂತಿಲ್ಲ ಎಂದು ಮಾರ್ಗ ಸೂಚಿಯಲ್ಲಿ ತಿಳಿಸಿದೆ